ಕಾವ್ಯ ಸಂಕ್ರಾಂತಿ
ಗಜಲ್
ನಯನ. ಜಿ. ಎಸ್
ಉತ್ತಿ ಬಿತ್ತಿದ ಬೀಜದಲಿ ಹಚ್ಚನೆಯ ಫಸಲನು ಘಮಿಸುತಿದೆ ಸಂಕ್ರಾಂತಿ
ತಿದ್ದಿ ತೀಡಿದ ಹೊಲದಲಿ ಪಚ್ಚೆ ಸೊಬಗನು ಲಾಸ್ಯವಾಡಿಸುತಿದೆ ಸಂಕ್ರಾಂತಿ
ಹೆಬ್ಬಂಡೆಯನು ಕೆತ್ತಿದ ಉಳಿಯಲಿ ಶೋಭಿಸುವ ಶಿಲ್ಪದಂತೆ ಉಳುಮೆಯು
ಬೆವರಿನ ಹನಿಗಳೊಳು ತೊಯ್ದ ಇಳೆಗೆ ನವಕಾಂತಿ ವರ್ಷಿಸುತಿದೆ ಸಂಕ್ರಾಂತಿ
ಶರಶೆಯ್ಯೆಗೆ ನೆಚ್ಚಿದ ಗಂಗಾಸುತನಿಗೂ ಇಹುದು ಸುದಿನದೊಡನೆ ಗಾಢ ಬಂಧ
ದಕ್ಷತೆಯಲಿ ಬೆಂದ ಅಂತರಾತ್ಮಗಳಿಗೆ ನಾಕದ ಕದವ ತೆರೆಸುತಿದೆ ಸಂಕ್ರಾಂತಿ
ದುಷ್ಟ ಶಿಕ್ಷೆಯ ಪಥದಲಿ ಅಂಕುರಿಸಿದ ಧರ್ಮಶಾಸ್ತನಿಗೂ ತೃಪ್ತಿಯ ಪರ್ವವಿದೆ
ಭಕ್ತಿಗೆ ಮೆಚ್ಚುವ ದೇವನ ಇರವನು ಗಗನದಿ ಬೆಳಗಿಸಿ ಮೆರೆಸುತಿದೆ ಸಂಕ್ರಾಂತಿ
ಮನೋಜ್ಞತೆಯ ಸಂಪನ್ನ ಭಾವದಿ ನಯನಗಳು ಉಣುತಿದೆ ಹರ್ಷದ ಸಿಹಿಯ
ದುಡಿಮೆಗೆ ಮೌಲ್ಯವಿತ್ತ ಧರಿತ್ರಿಗೆ ತಾಯ್ತನದ ಭವ್ಯಸೌಖ್ಯವ ಹರಸುತಿದೆ ಸಂಕ್ರಾಂ
ಅದ್ಭುತವಾದ ಪದಪುಂಜಗಳು
ಪ್ರೀತಿಯ ಮೆಚ್ಚುಗೆಯ ಮಾತುಗಳಿಗೆ ತುಂಬು ಹೃದಯದ ಧನ್ಯವಾದಗಳು ಡಿಯರ್
Happy Sankranthi dear tange
ತುಂಬು ಹೃದಯದ ಧನ್ಯವಾದಗಳು ಅಕ್ಕ
ನಿಂಗೂ ಅದೇ ಪ್ರೀತಿಯ ಶುಭಾಶಯಗಳು.
Chennagi Baredhidderi.. Happy Sankranti!