ಬಿ.ಟಿ.ನಾಯಕ್-ನಮ್ಮಯಪರಿಸರ

ಕಾವ್ಯ ಸಂಗಾತಿ

ನಮ್ಮಯ ಪರಿಸರ

ಬಿ.ಟಿ.ನಾಯಕ್

ಪರಿಸರ ನವಿರಾಗಿ ಆವರಿಸಿದರದು ಹಸಿರ್ಬಸಿರು,
ಅದಕೆ ನಮ್ಮಯ ಕಾಳಜಿ ಆಗ್ವದು ಧರ್ಮದುಸಿರು,
ಮಹಾದೇವ್ನ ಕೊಡುಗೆಯದೆಂದೂ ಅಲಕ್ಷಿಸದಿರು,

ತಂಪು-ಗಾಳಿ ಮಳೆ-ನೀರು ಜೀವಿ ಸಂಕುಲಕೆ ಬೇಕು,
ಕಂಪು ತರ್ವ ಇಳೆ, ಸುಸ್ವರ ನೀಡ್ವ ಕೋಗಿಲೆ ಬೇಕು,
ಸೊಂಪಾಗಿರುವ ಗುಂಯ್ಗುಟ್ಟುವ ಭ್ರಮರವು ಬೇಕು.

ಕಾಯೀ ಹಣ್ಣು ಮೂಡಿ ಜೀವಿಗಳ ಉದರ ತಣಿಸಲಿ,
ಭೂಮಿ ಅಡಿಯ ಗೆಡ್ಡೆ ಗೆಣ್ಸು ಜೀವದಾಧಾರವಾಗಲಿ,
ತೆಂಗು ನಾರು ಕುರುಚಲು ಎಲೆ ಜೀವ್ಗಳನು ರಕ್ಷಿಸಲಿ.

ಪರಿಸರ ಸಂಭ್ರಮ ನೋಡ್ವ ಕಣ್ಗಳಿಗೆ ಅಲ್ಹಾದವಿರಲಿ,
ಆನಂದದೀ ಪ್ರಾಣಿ ಸಂಕುಲ ಸುಖಿಯಾಗಿ ಜೀವಿಸಲಿ,
ಜೀವನೋಲ್ಲಾಸ ನೀಡ್ವ ಪರಿಸರ ನಮ್ಮದೇ ಆಗಿರಲಿ.

ಪರಿಸರವು ಕರೆದಂತಾದಾಗ ಮೈ ನವಿರೇಳುವುದು,
ಪರಿಸರವೇ ಉಸಿರಾದಾಗ ಉಲ್ಹಾಸ ತರುವುದು,
ಪರಿಸರವೇ ನಮ್ಮ ಜೀವವಾದಾಗ ಹರ್ಷವಾಗ್ವದು.


4 thoughts on “ಬಿ.ಟಿ.ನಾಯಕ್-ನಮ್ಮಯಪರಿಸರ

  1. Grate contribution.Nice thoughts on nature and how it helps us.Lovely writup.Thanks for sharing such thoughts.

Leave a Reply

Back To Top