ಕಾವ್ಯಸಂಗಾತಿ
ಸೆರಗಿನ ಸಿರಿ
ಹಮೀದಾಬೇಗಂ ದೇಸಾಯಿ
ನಾಹುಟ್ಟಿದಾಗ ನನ್ನ ಸುತ್ತಿಬೆಚ್ಚಗಿಟ್ಟದ್ದು
ನನ್ನಜ್ಜಿಯಹರಿದಸೆರಗು
ನಾಅತ್ತಾಗ ಕಣ್ಣೀರೊರೆಸಿದ್ದು
ನನ್ನವ್ವನ ಮಮತೆಯಸೆರಗು
ದೊಡ್ಡವಳಾದಾಗನನ್ನಮಾನಮುಚ್ಚಿದ್ದು
ಮಾವತಂದ ಹಸಿರು ಸೆರಗು
ಮದುವೆಗೆಮೆರುಗುತಂದುಮೆರೆದದ್ದು
ನನ್ನಪ್ಪ ಉಡಿಸಿದ ರೇಶ್ಮೆ ಸೆರಗು
ಬದುಕಿನಲ್ಲಿ ಬಣ್ಣ ತುಂಬಿ ನಕ್ಕದ್ದು
ನನರಾಯತಂದ ಟೋಪತೆನಿಸೆರಗು
ಹಾಲುಕುಡಿವನನಕಂದನ ಮರೆಮಾಡಿದ್ದು
ಅಂಜೂರಿಚಿಕ್ಕಿಜರೀ ಸೆರಗು
ಗುರು ಹಿರಿಯರಗೌರವಕೆಬಾಗಿದ್ದು
ತಲೆಮೇಲೆಹೊದ್ದದೊಡ್ಡಸೆರಗು
ಚಂದದ ಕಸೂತಿಯ ಚಂದ್ರಕಾಳಿ
ಕನ್ನಡತಿಯಹೆಮ್ಮೆಯ ಸೆರಗು..
ಬಹಳ ಚೆಂದದ ಕವನ….ಮೇಡಂ…ನನಗೆ ಇಷ್ಟವಾದ ನಿಮ್ಮ ಕವಿತೆಗಳಲ್ಲಿ ಇದು ಮೊದಲು ….