ಕಾವ್ಯ ಸಂಗಾತಿ
.
ಕಡಲ ಧ್ಯಾನ
ಅಕ್ಷತಾ ಜಗದೀಶ

ಅಗಾಧವಾದ ಕಡಲಿಂದು
ಮೌನವೃತವ ತಾಳಿದೆ
ಸದ್ದು ಗದ್ದಲವಿಲ್ಲ
ಭೋರ್ಗರೆಯುವ ಅಲೆಗಳಿಲ್ಲ
ಒಡಲ ಒಡೆಯನಿಗೆ
ನಮಿಸುತಲಿದೆ ತಾನಿಂದು
ತಂಗಾಳಿಯ ರಾಗದಲ್ಲಿ
ಆಲಾಪ ಕೇಳುತಿದೆ
ಪ್ರಶಾಂತ ಸಾಗರದಲ್ಲಿ…
ಕಡಲ ಅಲೆಗಳ ಸಂಚಲನ
ಮುತ್ತಿಕ್ಕುತ್ತಿದೆ ತೀರಕೆ
ಬೆಳದಿಂಗಳ ಬೆಳಕು
ಹುಣ್ಣುಮೆ ಚಂದ್ರನ ಪ್ರತಿಬಿಂಬವಾಗಿ
ಕಡಲನೆ ಆವರಿಸಿದೆ
ಧ್ಯಾನದಲ್ಲಿ ಲೀನವಾಗಲು…
ಕಡಲ ಒಡಲಾಳದಲ್ಲಿ
ಹುದುಗಿಹುದು
ಅನಂತದೆಡೆಗೆ ಸಾಗುವ
ವಿಹಂಗಮ ಲೋಕ
ತಲ್ಲಿನತೆಯ ಧ್ಯಾನದಲ್ಲಿ
ಮೌನದ ಅಂತರಾಳದಲ್ಲಿ
ಕಾಣುತಿಹುದು ಅದೆಂತೋ
ಮನಮೋಹಕ ನೋಟ…
ಶಾಂತವಾಗಿದೆ ಸಾಗರ
ಹೊಸ ದಿಗಂತದೆಡೆಗೆ
ಮುಗಿಲಿನ ಪ್ರತಿಬಿಂಬವಾಗಿ
ವನದ ಒಡಲಾಳದ
ನದಿಗಳ ಸ್ಷರ್ಶದೊಳು
ತಾನೊಂದು ಸಂಗಮವಾಗಿ
ಮೌನವಾಗಿದೆ ಕಡಲು
ತಲ್ಲಿನತೆಯ ಧ್ಯಾನದಲ್ಲಿ….
ಸಾಗರ ಶಾಂತವಾಗಿರುವುದೇ ಇಲ್ಲಿನ ಉಪಮೆ