ಇಮಾಮ್ ಮದ್ಗಾರ-ಗಜಲ್ (ಪಿಸುಮಾತು)

ಕಾವ್ಯ ಸಂಗಾತಿ

ಗಜಲ್ (ಪಿಸುಮಾತು)

ಗಜಲ್ (ಪಿಸುಮಾತು)

ಮಂಗನಂತಮನಸು ಮರ್ಕಟವಾಗಿದ್ದರೇ ಚಂದ
ಇಲ್ಲದಿದ್ದರೆ ಮುಗ್ಧತೆಯಮರೆತು
ಮೃಗವಾಗಿಬಿಡುತ್ತದೆ ಸಾಜನ್

ನೆನಪುಗಳನ್ನು ನೆನಪಿಸಿಕೊಳ್ಳುತ್ತಲೇ ಇರಬೇಕು
ಇಲ್ಲದಿದ್ದರೆ ಕನಸುಗಳು ಕಳುವಾಗಿಬಿಡುತ್ತವೆ ಸಾಜನ್

ಕಟ್ಟಿಟ್ಟಕನಸಿಗೆ ಕಾಪಿಡಲು
ಮುಚ್ಚಿಟ್ಟಮಾತಿಗೆ ಧ್ವನಿಯಾಗಲು ಪ್ರಯತ್ತಿಸಬೇಡ ಸಾಜನ್

ಮನಸಿನಮೌನಕ್ಕೆ ನೀನು ಮಾತಾಗುವಮುನ್ನವೇ
ಹೃದಯದಗಾಯಕ್ಕೆ ಮುಲಾಮುಸಿಕ್ಕಿದೆ ಅದೀಗೀಗ ಮಾಯುತ್ತಿದೆ ಸಾಜನ್

ನಿನ್ನನೆನಪುಗಳು ನೇಣಿಗೇರುವಮುನ್ನ
ಕರಗುವ ಭಯವಿದೆ ನನ್ನಕನಸಿಗೆ ಸಾಜನ್

ನಾಳೆಯನಿನ್ನ ಕನಸಿಗೆ ನೆನ್ನೆಯನನ್ನನೋವು ಕಾಡದಿರಲಿ
ನೀನು ನೋವುಣ್ಬೇಡ ಸಾಜನ್
ನಾನೇಸರಿಯುವೆ ತೆರೆಯಮರೆಗೆ

ಖಾಲಿಯಿದ್ದರೆಮಸಸ್ಸು ಎನಾದರೂ ಬರೆದುಕೋ ಇಮಾಂ ಪ್ರೀತಿಯರುಜುಮಾತ್ರ ಮಾಡಬೇಡ ಅದುಸಮರ ಸಾರಿದ ಸಾವಿನಂತೆ


Leave a Reply

Back To Top