ಪ್ರಹರಿ-ಪುಸ್ತಕ ಪರಿಚಯ

ಪುಸ್ತಕ ಸಂಗಾತಿ

ಪ್ರಹರಿ-ಸೂರ್ಯಸಖ ಪ್ರಸಾದ್ ಕುಲಕರ್ಣಿ

ಪ್ರಹರಿ

ಕವನ ಸಂಕಲನ

ಸೂರ್ಯಸಖ ಪ್ರಸಾದ್ ಕುಲಕರ್ಣಿ

9483850280

Price :120₹

H.S.R.A ಪ್ರಕಾಶನ

ಲಗ್ಗೆರೆ -ಬೆಂಗಳೂರು

 ಪ್ರಹರಿ ಹೆಸರು ಕೇಳಲು ತುಂಬಾ ಸುಂದರವಾಗಿದೆ, ಪ್ರಹರಿ ಎಂದರೆ ಕಾವಲುಗಾರ ಎಂದರ್ಥ.

 ಕವನ ಸಂಕಲನವನ್ನು ತಮ್ಮ ಅಮ್ಮ ಮತ್ತು ಅಪ್ಪನಿಗೆ ಅರ್ಪಣೆ ಮಾಡಿದ್ದಾರೆ.

ಪ್ರಹರಿ ಕವನ ಸಂಕಲನಕ್ಕೆ ಮುನ್ನುಡಿಯನ್ನು ಕಪಿಲಾ ಶ್ರೀಧರ್..ಲೇಖಕಿ,ಮಾನಸೋ ಪಚಾರ  ತಜ್ಞೆ ಬೆಂಗಳೂರು ಬರೆದಿದ್ದಾರೆ.

 ಕವಿಯ ಭಾವ ಪ್ರಪಂಚದಲ್ಲಿ ಕವಿ ಎಂಬ ತಾಯಿ ಮತ್ತು ಕವಿತೆ ಎಂಬ ಮಗು ಇಬ್ಬರೇ ಪರಸ್ಪರ ತಮ್ಮದೇ ಲೋಕದಲ್ಲಿ ಸವoಹನ ನಡೆಸುತ್ತಿರುವಾಗ ಒಂದು ಕವಿತೆಯ ಸುತ್ತ ಅನೇಕ ಸಾಧ್ಯತೆಗಳ ಪದರಗಳು ಸೇರಿಕೊಳ್ಳುತ್ತಾ ಹೋಗುತ್ತವೆ ಎಂದು ಹೇಳಿದ್ದಾರೆ.

 ಪ್ರಸಾದ್ ಕುಲಕರ್ಣಿಯವರ ಪ್ರಹರಿ ಸಂಕಲನದ ಕವಿತೆಗಳು ಒಂದಕ್ಕೊಂದು ವಿಭಿನ್ನ ರೀತಿಯಲ್ಲಿ ರಚಿತವಾಗಿದೆ.

 ಕವಿಗಳು ತಾವು ಮೊದಲಿಗೆ ಗದ್ಯವನ್ನು ಇಷ್ಟಪಡುತ್ತಿತ್ತು ನಂತರದಲ್ಲಿ ಕವನ ರಚಿಸಿದ್ದಾಗಿ ತಿಳಿಸಿದ್ದಾರೆ.

 ಕಾವು ಪಡೆದು ಮೆರೆದಾಡತೈತಿ ಆರು ಹೆಡಿಯ ಈ ಉರದ

ಶಿರದ ಮ್ಯಾಗ ಹೊತ್ತು ಕುಣಿತೈತಿ ಅಹಂಕಾರವೆಂಬ ಕರಗ.

 ಅರಿಷಡ್ವರ್ಗಗಳನ್ನು ಆರು ಹೆಡೆಯ ನಾಗರವು ಇದ್ದಂತೆ ಅದು ಹುತ್ತವೆಂಬ ಮನದಾಳವನ್ನು ಆವರಿಸಿದೆ ಎಂದು ವರ್ಣಿಸಿ ರಚಿಸಿದ್ದಾರೆ.

 ಪ್ರಹರಿ  ಕವನ ಸಂಕಲನವು ಭಾವನೆಯ ಪದಗಳ ಲಾಲಿತ್ಯದೊಂದಿಗೆ ಕೂಡಿದ ಒಂದು ಅಚ್ಚುಕಟ್ಟಾದ ಸಂಕಲನವಾಗಿದೆ ಎಂದು ಹೇಳಬಹುದು.

 ಈ ಕವನ ಸಂಕಲನದಲ್ಲಿ ಹಲವು ಮಜಲುಗಳಲ್ಲಿ ಕವಿತೆ ಕಟ್ಟುವುದರ ಜೊತೆಗೆ ಪುರಾಣಕ್ಕೆ ಸಂಬಂಧಿಸಿದ ಮತ್ತು ಪ್ರೀತಿ, ಪ್ರೇಮ,ಸ್ಪೂರ್ತಿ, ಸ್ವ ವಿಮರ್ಶೆಯಿಂದ ಕೂಡಿದ ಕವನಗಳಾಗಿವೆ.

 ಯಾವುದೇ ಬರಹಗಾರರಿಗೆ ಅವಳಿಗೆ ಎಷ್ಟೇ ಕಲೆಯಿದ್ದರೂ ಕುಟುಂಬದಲ್ಲಿ ಅವರಿಗೆ ಮಣ್ಣಿನ ಸಿಕ್ಕರೆ ಮಾತ್ರ ಮುಂದುವರೆಯಲು ಸಾಧ್ಯ ಎಂಬುದು ತಿಳಿಯುತ್ತದೆ. ಇಲ್ಲಿ ಅವರಿಗೆ ತಮ್ಮ ಕುಟುಂಬದವರಿಂದ ಬರೆಯಲು ಪ್ರೇರಣೆ ಸಿಕ್ಕಿತು ಎಂಬುದು ತಿಳಿಯುತ್ತದೆ.

 ಓ ಸೂರ್ಯ ಸಖನೇ

 ನಿನ್ನ ಬರವಣಿಗೆಯಲ್ಲಿ

 ಮುಂಜಾವಿನ ನವಿರಾದ  ರಶ್ಮಿಯ ಕಿರಣಗಳಿರಲಿ

 ಮಧ್ಯಾಹ್ನದ ಪ್ರಖರತೆಯಿರಲಿ

 ಎಂದು ಹಾರೈಸಿದ ತಮ್ಮ ಸಹೋದರಿಯ ಮನದ ಬರಹವನ್ನು ಇಲ್ಲಿ ತಿಳಿಸಿದ್ದಾರೆ.

 ಹಳೆಯ ನೆನಪುಗಳ ಮಧುರ ಮೆಲುಕಿಗೆ ಹೊಸ ಭಾವದ ಪುಳಕಗಳ ಮೀರಿ  ವಾಸ್ತವದ ನೆಲೆಗಟ್ಟಿನಲ್ಲಿ ಜಳ್ಳುಗಳ ಗಾಳಿಗೆ ತೂರಿ ಗಟ್ಟಿ ಕಾಳುಗಳ್ನು ಹೆಕ್ಕಿ ತಂದು ಕಣಜದಲ್ಲಿ ಶೇಖರಿಸಿ ಇಡುವಂತೆ ರಚಿಸಿ ಒಂದು ಅದ್ಭುತವಾದ ಪದಮಾಂತ್ರಿಕ ಈ ಸೂರ್ಯಸಖ ಎನ್ನಬಹುದು.

 ಪ್ರಹರಿ ಕವನ ಸಂಕಲನದಲ್ಲಿ ಒಟ್ಟು 67 ಕವಿತೆಗಳು ಇವೆ.

 ಶರೀಫರು, ಊರ್ಮಿಳೆ, ಶರ್ಮಿಷ್ಟೆ, ಋತು ಸಖಿ, ಆರಕ್ಷಕ, ಜೈ ಜವಾನ್, ಬೇಂದ್ರೆ ಕನ್ನಡ, ಹಸಿವು, ಯಶೋಧರ, ಅಮ್ಮ, ಶ್ರೀ ಬಸವೇಶ್ವರ, ಭಂ ಭಂ, ಬಾಹುಬಲಿ, ರಂಗಿನೆಪ್ಪು, ಪ್ರಹರಿ, ಅತೃಪ್ತಿ  ಹೀಗೆ ಹಲವಾರು ರೀತಿಯ ಭಾವನೆಗಳಿಂದ ಕೂಡಿದ ಕವನಗಳ ಮಿಶ್ರಣವೇ ಈ ಪ್ರಹರಿ.

ಶರೀಫರು

ಎಲ್ಲಿ ಶರೀಫರ ಬಗ್ಗೆ ಅವರ ಪೂರ್ತಿ ಜೀವನದ ಇತಿಹಾಸವನ್ನು ಒಂದು ಕವನ ಮುಖಾಂತರ ಸೆರೆ ಹಿಡಿದಿದ್ದಾರೆ.

ಇನ್ನೊಂದು ಕವನ ಸಾಧನೆ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ.

 ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವಿರುತ್ತದೆ. ಆದರೆ ಪ್ರತಿಯೊಬ್ಬರೂ ಸಾಧನೆಗೈದವರು ವಿರಳ ಮಾತ್ರ.

 ಸಾಧನೆ

 ಎಂಥದೇ ಇರಲಿ ನಮ್ಮ ಬಾಳ ವೇದನೆ

 ಆಗದೆ ನಮ್ಮ ಬದುಕಿನಲ್ಲಿ ಸಾಧನೆ

 ಇರುವ ಎಲ್ಲರೊಳಗೊಬ್ಬ ದೇವ

 ಶ್ರಮವೇ ನಮ್ಮೆಲ್ಲರ ಛಲವಾದರೆ

 ಮುಟ್ಟಲು ಅಸಾಧ್ಯವೇ ಸಾಧನೆಗೆರೆ

 ಕಣ್ಣೀರೆ ಬರದ ಕಣ್ಣು ಯಾರಿಗಿಲ್ಲಿದೆ

 ಪನ್ನೀರೆ ಹೆಸರಿಸಿಕೊಳ್ಳುವ ಶಕ್ತಿ ನಮಗಿದೆ

 ಭಯವಿರಲಿ ಅದೇ ಬದುಕಿನ ಬಲವು

 ಬೀಸುವ ಗಾಳಿಯಲ್ಲಿ ಹಚ್ಚಬೇಕು ದೀಪ

 ನಮ್ಮ ಹಾದಿಗೆ ಅದುವೇ ಪ್ರದೀಪ

 ಚಿಕ್ಕ ಯೋಚನೆ ಮುಂದೆ ಆಗಲಿದೆ ಸಾಧನೆ

 ತಕ್ಕ ಯೋಜನೆ ರೂಪಿಸುವುದೇ ವಿವೇಚನೆ

 ಸoಯಮದ ಸಂಗ್ರಾಮ ಮನೆ ನಡೆಸಲಿ

 ಗುರಿಯ ಜೊತೆಗೆಂದು  ಬೇಡ ಸಂಧಾನ

 ನಮ್ಮದೇ ಗೆಲುವಾಗ ಬೇಡ ಅನುಮಾನ

 ತಾರೆಗಳೇ ಇರಲಿ ಎಲ್ಲ ಜಗದ ಪಾಲಿಗೆ

 ಮಿಂಚು ಹುಳುಗಳೆ ಸಾಕು ನಮಗೆ ಅದುವೆ ದೀವಿಗೆ

 ಪಟ್ಟು ಬಿಡದೆ ನಾವು ನುಗ್ಗಿದಾಗ ವಿಜಯ

 ನಿಚ್ಚಳಿಕೆ ಹಾಕಬೇಕು ಆಕಾಶಕ್ಕೆ

 ಆಗ ಇರಬಹುದು ನಾವು ಅಟ್ಟಕ್ಕೆ

 ಈ ಮೇಲಿನ ಸಾಧನೆ ಎಂಬ ಕವನದಲ್ಲಿ ಈ ಕವಿಯು ತನ್ನ ಸಾಧನೆಯ ಬಗ್ಗೆ ಹೇಗೆ ಪ್ರತಿಯೊಬ್ಬರೂ ಬಾಳ ವೇದನೆಯಿದ್ಧರು ಬದುಕಿನಲ್ಲಿ ಹೇಗೆ ಸಾಧನೆ ಮಾಡಬೇಕು ಎಂಬುದು ತಿಳಿಸಿಕೊಟ್ಟಿದ್ದಾರೆ.

 ಕಣ್ಣೀರಿಲ್ಲದ ಕಣ್ಣು ಯಾವುದು ಎಂಬುದು ಮನಸ್ಸಿಗೆ ತುಂಬಾ ಆಪ್ತವೆಸುತ್ತದೆ.

 ಜೋರಾದ ಗಾಳಿಯಲ್ಲಿ ಹಚ್ಚಬೇಕು ದೀಪ ಎಂಬುದು ಅವರ ಛಲವನ್ನು ನಿದರ್ಶನ ಮಾಡುತ್ತದೆ.

 ಯಾವುದೇ ಸಾಧನೆಗೆ ಯೋಜನೆ ಎಂಬುದು ಚಿಕ್ಕದಾಗಿದ್ದರೂ ಪರವಾಗಿಲ್ಲ ಇರಲಿ ಎಂಬುದು ಈ ಈ ಸಾಧನೆ ಕವಿತೆಯಲ್ಲಿ ತೋರಿಸಿಕೊಟ್ಟಿದ್ದಾರೆ.

 ಇನ್ನೊಂದು ಕವನ ನಡೆದಾಡಿದ ದೇವರು

 *ದೇವರಾದಿರಿ ನೀವು ಈ ಜಗದಲ್ಲಿ ನಮ್ಮ ಬದುಕಲಿ ಬೆಳಕಾದಿರಿ ನೀವು ಬಾಳ ಕತ್ತಲಲ್ಲಿ ಸತ್ಯಪಥದಲಿ

 ಶರಣರಿಗೆ ಶಂಕರ ಜಂಗಮರೀಶ್ವರ

 ಕರುಣೆಗೆ ಸಾಗರ ಧರಣಿಗೆ ನೇಸರ

 ಸಿದ್ದಗಂಗೆ ಒಂದು ದೇಶ

 ಅಲ್ಲಿ ನೀವೇ ಶಾಶ್ವತ ಈಶ*

 ಸಾಧನೆ ಎಂಬ ಕವಿತೆಯಲ್ಲಿ ಕವಿಯು ನಡೆದಾಡಿದ ದೇವರು ಸಿದ್ದಗಂಗಾ ಗುರುಗಳ ಬಗ್ಗೆ ಅಮೋಘವಾಗಿ ಬರೆದಿದ್ದಾರೆ.

 ಒಟ್ಟಾರೆಯಾಗಿ ಪ್ರಹರಿ ಕವನ ಸಂಕಲನವು ಎಲ್ಲಾ ಭಾವನೆಗಳ ಸಮ್ಮಿಶ್ರವೆಂದು ಹೇಳಬಹುದು.

————————————

ಸವಿತಾ ಮುದ್ಗಲ್

Leave a Reply

Back To Top