ವೀರಣ್ಣ. ಮ.ಹೂಲಿ-ಪರಿಸರವೇ ದೇವರು

ಕಾವ್ಯ ಸಂಗಾತಿ

ಪರಿಸರವೇ ದೇವರು

ವೀರಣ್ಣ. ಮ.ಹೂಲಿ

ಮೋಡಗಳ ಹಾದಿ ನೋಡುತಾ ಮಳೆ ಬರುವುದನ್ನೇ ಕಾಯುವ ಮಾನವ ||

ಸೆಟಲೈಟ್,ಮೊಬೈಲ್,
ಕಂಪ್ಯೂಟರ್ ಕಂಡು ಹಿಡಿದರೂ
ಒಂದು ಹನಿ ಮಳೆ ಬರಿಸಲಾಗಲಿಲ್ಲಾ ||

ಗಿಡ-ಗುಡ್ಡ ಕಡೆದು
ಬರಗಾಲ ಬರಮಾಡಿಕೊಂಡು
ಹನಿ ನೀರಿಗಾಗಿ
ಹಾಹಾಕಾರದಿಂದ ಪರದಾಡುತ್ತಿರುವೆ,

ದೇವರ (ಪರಿಸರ) ಮೊರೆ ಹೋಗಿ,
ಪೂಜೆ ಪುನಸ್ಕಾರ ಮಾಡಿ,
ದೇವರ ಕೃಪೆಗಾಗಿ ಕಾಯುತ್ತಿರುವೆ…

ಒಂದೇ ಸಮಯದಿ ಬರುವ
ಮಾವಿನ ಹಣ್ಣು ಸಿಹಿ
ನೀರಲ ಹಣ್ಣು ಕಹಿ…
ಇದುವೇ ಪರಿಸರ |
ಪರಿಸರವೇ ದೇವರು ||


2 thoughts on “ವೀರಣ್ಣ. ಮ.ಹೂಲಿ-ಪರಿಸರವೇ ದೇವರು

Leave a Reply

Back To Top