ಇಹಲೋಕ ತ್ಯಜಿಸಿದ ಪ್ರಖ್ಯಾತ ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ಕೆ.ಸತ್ಯನಾರಾಯಣ —
ಇಹಲೋಕ ತ್ಯಜಿಸಿದ ಪ್ರಖ್ಯಾತ ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ಕೆ.ಸತ್ಯನಾರಾಯಣ —
ಇತ್ತೀಗಷ್ಟೇ ಪತ್ರಕರ್ತ ಹಾಗೂ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ‘ಮನೆಯಂಗಳದಲ್ಲಿ ನುಡಿ ನಮನ’ ಎಂಬ ಆ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರ ಮನೆಯಂಗಳಕ್ಕೇ ಹೋಗಿ ಆ ಹಿರಿಯ ಜೀವ, ಹಿರಿಯ ವಿಶ್ರಾಂತ ಪತ್ರಕರ್ತ ಕೆ.ಸತ್ಯನಾರಾಯಣವರನ್ನು ಅಭೂತಪೂರ್ವವಾಗಿ ‘ನಮನ’ಗಳನ್ನು ಸಲ್ಲಿಸಿದ್ದರು. ಅಲ್ಲದೇ ಅವರನ್ನು ಕೊಂಡಾಡಿಕೊಂಡು ಅವರ ಈ ವರೆಗಿನ ಪತ್ರಿಕೋದ್ಯಮದ ಗುಣಗಾನವನ್ನು ಮಾಡಿದ್ದರು. ಅದೇ ಆ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣವರ ಕೊನೆಯ ಕಾರ್ಯಕ್ರಮವಾಗಿತ್ತು..!
ಇಂತಹ ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ಕೆ.ಸತ್ಯನಾರಾಯಣ ಅವರು ಈಗ ಇಹಲೋಕ ತ್ಯಜಿಸಿದ್ದಾರೆ..! ಅವರ ಕುರಿತು ಒಂದಿಷ್ಟು ಗುಣಗಾನವನ್ನು ಮಾಡೋಣ ಈಗ. ಅದುವೇ ನುಡಿ ನಮನವೂ ಹೌದು ನಮ್ಮ ಮಟ್ಟಿಗೆ..!
ಪ್ರಖ್ಯಾತ ಹಿರಿಯ ಪತ್ರಕರ್ತ ಮತ್ತು ಕನ್ನಡಪ್ರಭ ಪತ್ರಿಕೆಯ ನಿವೃತ್ತ ಸಂಪಾದಕರಾದ ಕೆ.ಸತ್ಯನಾರಾಯಣ ಅವರು ಇಂದು ಭಾನುವಾರ ನಿಧನರಾಗಿದ್ದಾರೆ..!
‘ತಾಯ್ನಾಡು’ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ್ದ ಸತ್ಯನಾರಾಯಣ ಅವರು, ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯವನ್ನು ನಿರ್ವಹಿಸಿದ್ದರು. ಅವರು ಸಂಪಾದಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು..!
ಕೆ.ಸತ್ಯನಾರಾಯಣ ಅವರು ತಮ್ಮ ಅಂಕಣಗಳ ಮೂಲಕ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದವರು. ತಮ್ಮ ಈ ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಿದ್ದ ಅವರು, ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿಟ್ಟುಕೊಂಡಿದ್ದರು..!
ಬೆಂಗಳೂರಿನ ಜಯನಗರದ ಎಲ್.ಐ.ಸಿ. ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ..!
ಕೆ.ಸತ್ಯನಾರಾಯಣ ಅವರು ‘ಇಂಡಿಯನ್ ಎಕ್ಸ್‌ಪ್ರೆಸ್’ ಸೇರಿದಂತೆ ಪ್ರತಿಷ್ಠಿತ ಸುದ್ದಿ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದವರು ಮತ್ತು ‘ಕನ್ನಡ ಪ್ರಭ’ದಲ್ಲಿ ಅವರ ಜನಪ್ರಿಯ ಅಂಕಣಗಳಾದ ‘ನಗರಪ್ರದಕ್ಷಿಣೆ’ ಮತ್ತು ‘ವ್ಯಕ್ತಿ ವಿಚಾರ’ ಮೂಲಕ ಅವರು ಸಾಕಷ್ಟು ಗಮನ ಮತ್ತು ಜನಪ್ರಿಯತೆಯನ್ನು ಗಳಿಸಿದ್ದರು. ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲಿಯೂ ಸರಳ ಶೈಲಿಯಲ್ಲಿ ಬರೆಯುತ್ತಿದ್ದರು ಅವರು. ಅವರು ಹಣಕಾಸು, ವ್ಯವಹಾರ ಮತ್ತು ಬಜೆಟ್ ವರದಿಗಾರಿಕೆಯಲ್ಲಿ ಪರಿಣತರಾಗಿದ್ದರು..!
ಅವರ ನಿವಾಸದಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮೃತ ಕೆ.ಸತ್ಯನಾರಾಯಣ ಅವರು ಪತ್ನಿ ವೆಂಕಮ್ಮ ಹಾಗೂ ಪುತ್ರಿ ಅಪೂರ್ವ ಅವರನ್ನು ಅಗಲಿದ್ದಾರೆ..! ಅವರಿಗೆ ಈಗ 82 ವರ್ಷ ವಯಸ್ಸಾಗಿತ್ತು..!
ಕೆ.ಶಿವು.ಲಕ್ಕಣ್ಣವರ
ಆತ್ಮಕ್ಕೆ ಶಾಂತಿ ಸಿಗಲಿ, ಭಾವಪೂರ್ಣ ಶ್ರದ್ದಾಂಜಲಿ