ಡಾ. ತಯಬಅಲಿ.ಅ. ಹೊಂಬಳ-ಅಜ್ಜಿಯ ಕೋಲು

ಮಕ್ಕಳ ಕವಿತೆ

ಅಜ್ಜಿಯ ಕೋಲು

ಡಾ. ತಯಬಅಲಿ.ಅ. ಹೊಂಬಳ

ಅಜ್ಜಿಯ ಕೋಲು
ನೋಡಲು ಜೋಲು
ಟಕ್ ಟಕ್ ಕೋಲು
ಅಜ್ಜಿಯ ತಲೆ ಬೋಳು

ಅಜ್ಜಿ ಬಾಯಿತೆರೆದು ನಗಲು
ಪೇಪರಮಂಟು ಗೋಲು
ಮಾತು ಬಲು ತೊದಲು
ನಮಗೆ ಬಲು ನಗಲು

ಕಾಡಿಸೊದು ಮೋಜು
ಅಜ್ಜಿ ಮಾತು ಗಜುಬೀಜು
ಅರ್ಥವಾಗದ ಮಾತು
ಕೇಳಿ ನಕ್ಕೇವು ಆಜುಬಾಜು

ಅಜ್ಜಿಯ ಕೈ ಕೋಲು
ನನ್ನ ಕೈ ಬಾಲು
ಓಡುತ್ತಲಿದೆ ಜೋರು
ಹಿಡಿದೆಳೆದಳು ಬಲು ಜೊರು

ಅಜ್ಜಿಗೆ ಅಜ್ಜಿಯೇ ಸಾಟಿ
ಮುಕ್ತಿಗೆ ಶಕ್ತಿಗೆ
ಅದಕ್ಕೆ ಎಲ್ಲರಿಗೂ ಭಯ
ಅಜ್ಜಿಯ ಕೋಲಿಗೆ

ಅಜ್ಜಿಯ ಕೋಲು
ನನ್ನ ಆಟದ ಗೋಲು
ಗೆದ್ದ ಮೇಲೆ ಗಲ್ಲಕೆ
ಮುತ್ತಿನ ಗೋಲು.


One thought on “ಡಾ. ತಯಬಅಲಿ.ಅ. ಹೊಂಬಳ-ಅಜ್ಜಿಯ ಕೋಲು

Leave a Reply

Back To Top