ಅರ್ಚನಾ ಯಳಬೇರು ಕವಿತೆ-ಸಂಭ್ರಮ

ಕಾವ್ಯ ಸಂಗಾತಿ

ಸಂಭ್ರಮ

ಅರ್ಚನಾ ಯಳಬೇರು

ನನ್ನೆದೆಯ ಅವನಿಯಲಿ
ಭವ್ಯ ಕನಸುಗಳ ಬಿತ್ತನೆ
ಮೊಳೆತ ಭಾವಗಳ ಮಿಳಿತಕೆ
ನಿನ್ನೊಲವಿನ ಪೋಷಣೆ

ಚಿಗುರು ಪ್ರೇಮದಲಿ
ಪ್ರೀತಿ ವಿಹಗಗಳ ಕಲರವ
ಹುಚ್ಚೆದ್ದು ಕುಣಿಯುತಿದೆ
ನನ್ನೊಳಗಿನ ನವಭಾವ

l.

ನವವಸಂತನ ಹರುಷ
ಅಸುವಿನ ಏರಿಳಿತಕೆ
ಮುಂಗಾರಿನ ಮುದವು
ಪಿಸುಗುಟ್ಟುವ ಭಾವಕೆ

ರಂಗೋಲಿಯ ಚಿತ್ತಾರದಲಿ
ನಿನ್ನೊಲವಿನ ಬಿಂದುಗಳು
ಅರಳುವ ವಾಂಛೆಯಲಿ
ನಿನ್ಪ್ರೀತಿಯ ಕುಸುಮಗಳು

ಜೀವವೀಣೆ ಮೀಟುತಿದೆ
ನಿನ್ಪ್ರೇಮದ ನಾದಕೆ
ಒಲವ ಬುತ್ತಿಯ ಕಟ್ಟಿರುವೆ
ಸ್ವಪ್ನಗಳ ಸಂಭ್ರಮಕೆ


One thought on “ಅರ್ಚನಾ ಯಳಬೇರು ಕವಿತೆ-ಸಂಭ್ರಮ

Leave a Reply

Back To Top