ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಧನ್ಯವಾದ ಮಹಾಶಯ ಅವಳು ನನ್ನವಳು

ಸಚ್ಚಿದಾನಂದ ಕೆ.ಎಸ್.

ನಾಚಿ. ಬಳುಕುವಳು ಬಳ್ಳಿಯಂತೆ
ಮನದಿ. ನುಸುಳುವಳು ಮಳ್ಳಿಯಂತೆ
ಹೇಗೋ ಹೃದಯ. ಹೊಕ್ಕಿಕಳ್ಳಿಯಂತೆ
ಜೀವಕೆ. ಹೊಳಪ. ಹಚ್ಚಿ ಬೆಳ್ಳಿಯಂತೆ

ತರಲೆ, ತಂಟೆ. ತಕರಾರು ತುಂಟತನ
ಮನದಲೇನೋ ಸಂಚುಕಣ್ಲಲಿ ಮಿಂಚು
ಹುಸಿ ಕೋಪ,ತುಸುತಾಪ ಮುನಿಸು ಮೌನ
ಇವಕೆಲ್ಲ ಮೆರುಗು ಕೆನ್ನೆಯ ಕೆಂಚು

ಇಂದು ಅವಳದೇ. ಹುಟ್ಟಿದ ಹಬ್ಬ
ಆದರಾಗುವುದು ನನಗೇ. ಹಬ್ಬ
ಆದರ್ಶ ಪತಿಯಂತೆ ಅದಮಾತ್ರಮರೆತು
ಪ್ರತಿ ಸಲ ಪೂಜೆ ಪ್ರಸಾದ .
ನನಗೇ ದೊರೆತು

ಈಸಲ. ಹಾಗಾಗಲು ಬಿಡಲಿಲ್ಲ
ನೆನಪಿನಲ್ಲಿರುವುದು ದಿನಾಂಕ
ಹಾಗಾಗಿ ಇಲ್ಲ ಯಾವ ಆತಂಕ
ಆದ ಸಿದ್ಧತೆ ಅವಳಿಗೆ ಗೊತ್ತಿಲ್ಲ

ಮನೆಗೆ ಮುಂಚೆಯೇಹೋಗಬೇಕಿತ್ತು
ಬಡ್ತಿಯ ವೇಳೆ ಕೆಲಸ ಹೆಚ್ಚಾಗಿತ್ತು
ಬೇಡ ವೆಂದರೂ ತುಂಬಹೊತ್ತಾಗಿತ್ತು
ಯೋಚಿಸಿದೆ, ಎದುರಾಗುವ. ಆಪತ್ತು

ಕೋಪದಲಿ ಅವಅಧರಗಳುಅದುರಿ
ಹಣೆಯ. ಬೆವರಮಣಿಗಳು .ಚೆದುರಿ
ಕೊರಳ ಸರ ಇಳಿದು ಮೇಲಕ್ಕೇರಿ
ಕಣ್ಣೀರಿನಹನಿಗಳುಪಳ.ಪಳಉದುರಿ

ಕೇಶ ರಾಶಿಯು ಉರುಳಿ ಬೆನ್ನ ಮೇಲೆ ಹರಡಿ
ಕೈಗಳು ಸೆಟದು ಕಟ್ಟುತ ಬಿಗಿ ಹಿಡಿ
ನೆಲವ. ಪಾದದಿ ಬಡಿದು- ಬಡಿದು ನಡೆದು
ಕೈಗೆ ಸಿಕ್ಲಿದ್ದೆಲ್ಲವ ಕಿತ್ತು ಎಸೆದು

ಮನೆಯ ಬಾಗಿಲು ತೆರೆದೇಯಿತ್ತು
ಹೃದಯ ಡಬಡಬ ಬಡಿಯುತ್ತಿತ್ತು.
ಮೆಲ್ಲಗೆ ಹೋಗಿ ಮಲ್ಲಿಗೆ ಮುಡಿಸಿ
ಉಡುಗೊರೆಗಳ. ಮುಂದಕೆ. ಸರಿಸಿ

ಮೆಲು. ದನಿಯಲಿ ಪಿಸುಗುಟ್ಟಿದೆ
ಪ್ರಿಯತಮೆ, ಹುಟ್ಟುಹಬ್ಬದ ಶುಭಾಶಯ
ಅಚ್ಚರಿಯಲಿ. ನೋಡಿ ಎವೆಯಿಕ್ಕದೆ
ಆಲಂಗಿಸಿ ಹೇಳಿದಳು ಧನ್ಯವಾದಮಹಾಶಯ


About The Author

Leave a Reply

You cannot copy content of this page

Scroll to Top