ಕಾವ್ಯ ಸಂಗಾತಿ
ಗಜಲ್
ಅರುಣಾ ಶ್ರೀನಿವಾಸ
ಉಂಗುರ ತೊಡಿಸುವುದು ಅಷ್ಟೊಂದು ಸುಲಭವಿಲ್ಲ
ಭಾವಗಳ ಬೆರೆಸುವುದು ಅಷ್ಟೊಂದು ಸುಲಭವಿಲ್ಲ
ಕೊಟ್ಟ ಮಾತನ್ನು ಕೊನೆವರೆಗೂ ಕಾಯಬೇಕಲ್ಲ
ಹಿಡಿದ ಕೈಯನು ಬಿಡುವುದು ಅಷ್ಟೊಂದು ಸುಲಭವಿಲ್ಲ
ಕಾಲ ಕಳೆದಂತೆ ಗೆದ್ದಲು ಹಿಡಿಯಬಾರದು ಒಲವಿಗೆ
ಬತ್ತದೊರತೆಯನು ಸದಾ ಉಳಿಸುವುದು ಅಷ್ಟೊಂದು ಸುಲಭವಿಲ್ಲ
ಹೃದಯಗಳು ಬೆರೆಯದೆ ಬೇರೇನಿದೆ ಮಣ್ಣು ಈ ಬಾಳಿನಲ್ಲಿ
ಕಾರ್ಗತ್ತಲಲಿ ದೀಪ ಉರಿಸುವುದು ಅಷ್ಟೊಂದು ಸುಲಭವಿಲ್ಲ
ವ್ಯರ್ಥ ಸೊಲ್ಲುಗಳು ಬೇಡೆಂದು ಬಿಸಾಕಿದ ಮೌನಿ ನಾನು
ಬೇರು ಬಿಟ್ಟ ಮರವ ಉರುಳಿಸುವುದು ಅಷ್ಟೊಂದು ಸುಲಭವಿಲ್ಲ.
ಅರ್ಥವತ್ತಾಗಿ ದೆ….
ಅರ್ಥವತ್ತಾಗಿ ಡೆ.
ಧನ್ಯವಾದಗಳು