ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ನನ್ನೊಂದಿಗೆ ಹಗೆ ಸಾಧಿಸಲಿಕ್ಕಾದರೂಸರಿ ಒಮ್ಮೆ ಬಂದು ಹೋಗು
ಮರುಳುವಾಗ ದುಃಖಿಸುವೆನೆಂದು ಅರಿತಾದರೂಸರಿ ಒಮ್ಮೆ ಬಂದು ಹೋಗು

ಭೂಮಿ ದುಂಡಗಿದ್ದರೂ ಅಗಲಿದ ಪ್ರೇಮಿಗಳ ಭೇಟಿಯು ಬರೀ ಭ್ರಮೆಯದು
ಬುವಿಯಲಿಹ ಹೆಣ್ಣು ಜೀವಿಗಳಲಿ ವಿಶೇಷ ನೀ ಆದರೂಸರಿ ಒಮ್ಮೆ ಬಂದು ಹೋಗು

ಗಂಡಸಿನ ಬಲಹೀನತೆಯೆ ಹೆಣ್ಣೆಂದು ಹೇಳಿಹರು ಬಹಳ ಚಿಂತಕರು ಹಿಂದೆ
ಜಗದಿ ಯಾರಿಗೂ ಋಣ ವಿಲ್ಲದ ಹೆಣ್ಣಾಗಿ ಬಂದರೂಸರಿ ಒಮ್ಮೆ ಬಂದು ಹೋಗು

ಲಕ್ಷ್ಮೀರಮಣ ರಾಧಾಕೃಷ್ಣ ಪಾರ್ವತೀಪತಿ ಜೋಡಿ ಹೆಸರ ಕೇಳಿಹರೆಲ್ಲಾ
ಸರಸ್ವತಿ ಬ್ರಹ್ಮ ಎಂದೆನರು ಏಕೆ ಹೇಳಲಾದರೂಸರಿ ಒಮ್ಮೆ ಬಂದು ಹೋಗು

ಹದಿನಾರು ಸಹಸ್ರ ಗೋಪಿಕೆಯರು ತಡೆದರೂ ತೊರೆದ ಬೃಂದಾವನವ ಕೃಷ್ಣಾ
ಸಾಮಾನ್ಯ ಗಜಲಿಗ ಬೇಡುವೆ ಇಲ್ಲೇ ಇರದಿದ್ದರೂಸರಿ ಒಮ್ಮೆ ಬಂದು ಹೋಗು.


About The Author

Leave a Reply

You cannot copy content of this page

Scroll to Top