ನಯನ. ಜಿ. ಎಸ್-ಗಜಲ್

ಕಾವ್ಯ ಸಂಗಾತಿ

ನಯನ. ಜಿ. ಎಸ್

ಗಜಲ್

ತಂಗಾಳಿಯು ಮನವ ಮುದಗೊಳಿಸುತಿದೆ ಸೂರ್ಯ ನೀ ಬೇಗ ಮುಳಗದಿರು
ವಿಹಗಗಳ ಕೂಗು ಬಾನಲಿ ಮೇಳೈಸುತಿದೆ ಸೂರ್ಯ ನೀ ಬೇಗ ಮುಳುಗದಿರು

ಅರಳು ಸುಮದೋಕುಳಿಯ ಕಂಪೊಳು ಮೈದಳೆದು ವಿಹರಿಸಿದೆ ಭಾವಲಹರಿ
ದುಂಬಿ ಗಾನ ಝೇಂಕರಿಸಿ ಹಿತವಾಗುತಿದೆ ಸೂರ್ಯ ನೀ ಬೇಗ ಮುಳುಗದಿರು

ಭಾವನೆಗಳ ದಿಬ್ಬಣದಿ ಮನವು ಹಸನಾಗಿದೆ ಈ ಹೊತ್ತಿನ ಸವಿ ಸತ್ವವನು ಹೀರಿ
ನೆನಪುಗಳ ಸುಗ್ಗಿ ಹಿಗ್ಗಿ ಹಾಸದಿ ಸಾಗುತಿದೆ ಸೂರ್ಯ ನೀ ಬೇಗ ಮುಳುಗದಿರು

ಬಾನಂಚಿನ ಮಿನುಗು ತಾರೆಯ ಮಿಂಚಿನಲಿ ಬಿರಿದು ನಕ್ಕಿದೆ ರಮ್ಯತೆಯ ಐಸಿರಿ
ಕದಪು ನಾಚಿ ಅಪೇಕ್ಷೆಗಳ ಹೆಣೆಯುತಿದೆ ಸೂರ್ಯ ನೀ ಬೇಗ ಮುಳುಗದಿರು

ಚೆಲುವಾಸೆಗಳ ಹಡೆದ ‘ನಯನ’ಗಳ ಬಿಂಬಕೆ ಬಾಷ್ಪಗಳ ಅಭಿಶಾಪ ತರವೇ
ನವ್ಯಾನುಭಾವದ ಅಂಕುರದಿ ಹರ್ಷ ಪಲ್ಲವಿಸುತಿದೆ ಸೂರ್ಯ ನೀ ಬೇಗ ಮುಳುಗದಿರು.


2 thoughts on “ನಯನ. ಜಿ. ಎಸ್-ಗಜಲ್

  1. ವ್ಹಾ ಸುಂದರವಾದ ಭಾವ ತುಂಬಿದ ಬರಹ… ಸೂರ್ಯನಲ್ಲಿರಿಸಿದ ಮನವಿ…

Leave a Reply

Back To Top