ಕಾವ್ಯ ಸಂಗಾತಿ
ಮತ್ತೇಕೆ ಮುನಿಸು
ಇಮಾಮ್ ಮದ್ಗಾರ
ಹಸಿಯಾದನೆಲದಲ್ಲಿ ಹಲಸಿನೆಸಳು ಬಿಡಿಸಿದಂತೆ ಕಲ್ಲೊಲೆಯಮೇಲೆ ಮನಸ ಬಿಸಿಮಾಡಿದವನು ನೀನು ಗೊತ್ತಿದ್ದೂ ಗೊತ್ತಿದ್ದೂ
ಮತ್ತೇಕೆ ಹುಸಿಮುನಿಸು
ಹುಣ್ಣಿಮೆಯ ಆ..ದಿನದಿರುಳಿನ ಶಶಿಯ ಬೆಳಕೆನಗೆ ತಾಕದಂತೆ
ನನ್ನೆದೆಯ ಹಾಡಿಗೆ ಶ್ರುತಿಯಾಗಿ ಮಿಡಿದು ರಾಗಗಳೆಲ್ಲವ ನುಡಿಸಿದವನು ನೀನು
ಮತ್ತೇಕೆ ಹುಸಿ ಮುನಿಸು
ಮಸಣವಾಗಿದ್ದ ಮನಸಲಿ ಹೊಸಕನಸ ಕೆತ್ತಿ
ಒಲವಿನಲೆ ಗೆಲುವ ತೋರಿಸಿ ಒಲುಮೆ ಬೀಜಬಿತ್ತಿ
ಬಸವಳಿದಬಾಳಿಗೆ ಭರವಸೆಯ ಬೆಳಕನಿತ್ತು ಬದುಕಿನ ದಾರಿತೋರಿ ಹೊಂಗಿರಣವಾದವನು ನೀನು
ಮತ್ತೇಕೆ ಮುನಿಸು
ಕಳೆದ ಕಾಲದ ಒಲವಿನೊಲೇಗಳ ತರೆತೆರೆದುನೋಡು ತನುಮನಗಳ ಕಾಣಿಕೆ ಗೈದು ಸಡಗರದೆನ್ನ ಬದುಕಿಗೆ ಸರಸದ ಸವಿಯೊಡ್ಡಿ ದಣಿಸಿದವನು ನೀನು
ಮತ್ತೇಕೆ ಈ ಮುನಿಸು