ಕಾವ್ಯ ಸಂಗಾತಿ
ಹೊಸ ಕಿರಣ
ಸವಿತಾ ಇನಾಮದಾರ್
ನಿನ್ನ ಆಗಮನದಿಂದ ಹಸಿರು ಸೀರೆಯನುಟ್ಟ
ಭೂತಾಯಿಯ ತುಟಿಯಂಚಿನಲ್ಲಿ ಹೂಮಿಂಚನೊಂದ ಕಂಡೆ.
ಅಂಬರವೂ ಮದುಮಗನಂತೆ ಸಿಂಗರಿಸಿ
ನಾಚಿ ನೀರಾಗುವುದನು ಕಂಡೆ.
ನನ್ನ ಕನಸಿನ ಹೊಸ ಚಿಗುರಿನಲ್ಲಿ
ಯಶದ ಪುಟ್ಟ ಎಲೆಯನು ಕಂಡೆ.
ಭಾವುಕ ಮನದ ಅರಮನೆಯಲ್ಲಿ
ನವರಸಧಾರೆಯ ಚಿಲುಮೆಯನು ಕಂಡೆ.
ನಿನ್ನ ಹೊಸ ಕಿರಣದ ಸ್ಪರ್ಶಕ್ಕಾಗಿ
ಕಾಯುತಿರುವೆ ನಾ ಕ್ಷಣ- ಕ್ಷಣ
ಹೊಸ ವರುಷಕೆ ನೀನೀಡು ಎಲ್ಲರಿಗೂ
ಸಂತಸ ಅನುಕ್ಷಣ.