ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ –

ಒಂದಿಷ್ಟು ರಿಲಾಕ್ಸ್ ತಗೊಳ್ಳಿ

ಸರ್ವರಿಗೂ ಹೊಸ ಆಂಗ್ಲ ಕ್ಯಾಲೆಂಡರ್ ನ ಹೊಸ ವರ್ಷದ ಮೊದಲ ದಿನದಂದು ಹೊಸ ವರುಷದ ಶುಭಾಶಯಗಳು. ಹೊಸ ಕ್ಯಾಲೆಂಡರ್ ವರ್ಷ ಸರ್ವರಿಗೂ ಸುಖ, ಶಾಂತಿ , ನೆಮ್ಮದಿ, ಆರೋಗ್ಯ ತರಲಿ ಎಂಬ ಹಾರೈಕೆ. 2023ನ್ನು ಸ್ವಾಗತಿಸುತ್ತಾ, ಕೊರೋನ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಮಾರಕ ಆಗದೆ ಇರಲಿ ಎಂಬ ಆಶಯ.

        ಕೊರೋನ ವೈರಸ್ ನಿಂದ ಸ್ವಲ್ಪ ಚೇತರಿಸಿಕೊಂಡು ಮತ್ತೆ ಬದುಕನ್ನು ಭಯದಲ್ಲೇ ಕಟ್ಟಿಕೊಂಡ ವರ್ಷ ಇದು. ಶಾಲಾ ಕಾಲೇಜು, ಪ್ರವಾಸ, ಜಾತ್ರೆ ಪೂಜೆ ಆರಂಭ. ಅಬ್ಬಾ ಎಲ್ಲಾ ಸರಿ ಆಯ್ತು ಎಂದು ನಿಟ್ಟುಸಿರು ಬಿಡುವಲ್ಲಿ  ಮತ್ತೊಂದು ಅಲೆಯ ಪ್ರಾರಂಭ. ಒಳಗಿದ್ದ ಮಾಸ್ಕ್ ಸ್ಯಾನಿಟೈಸರ್ ಗಳು ಮತ್ತೆ ಪತ್ತೆ. ಮತ್ತೆ ಮತ್ತೆ ಭಯ. ಯಾವಾಗ ಎಲ್ಲಾ ಬಂದ್ ಆಗುವುದೋ ಎಂಬ ಆತಂಕ. ಮತ್ತೆ ಬಸುರಿ, ಖಾಯಿಲೆಯ ಜನರಿಗೆ ಆಸ್ಪತ್ರೆಗೆ ಹೋಗುವುದು ಹೇಗೋ ಎಂಬ ಭಯ. ಸಾಧಾರಣ ತಲೆನೋವು, ಶೀತ, ಜ್ವರಕ್ಕೆ ಡಾಕ್ಟರ್, ಆಸ್ಪತ್ರೆಗೆ ಹೋಗಲು ಭಯ. ಎಲ್ಲಿ ಯಾವ ಪರೀಕ್ಷೆ ಮಾಡಿ ಮೂರು ಲಕ್ಷದ ವರೆಗೆ ಬಿಲ್ ಮಾಡ್ತಾರೋ, ಆ ಟೆಸ್ಟ್ ಈ ಟೆಸ್ಟ್ ಅಂತ ಮಾಡಿ ಒಂದು ವಾರ ಅಲ್ಲೇ ಉಳಿಸಿ ಡೆಡ್ ಬಾಡಿ ಮಾಡಿ ಬಿಡ್ತಾರಾ ಅಂತ ಭಯ. ಒಟ್ಟಿನಲ್ಲಿ ಈ ವರ್ಷ ಇಡೀ ಭಯದಲ್ಲೇ ಕಳೆದು ಹೋಯ್ತು. ಎಲ್ಲರೂ ಆ ಕೊರೋನ ವೈರಸ್ ಗೆ ಹೆದರಿ ಕಷಾಯ ಕುಡಿದದ್ದೆ ಕುಡಿದದ್ದು. ಸಣ್ಣ ಪುಟ್ಟ ಖಾಯಿಲೆಗೆ ಅಡುಗೆ ಕೋಣೆಯ ಅಜ್ಜಿ ಮದ್ದನ್ನೆ ಮಾಡಿದ್ದು. ಹಳೆ ಆಹಾರ ಪದ್ಧತಿಗೆ ಒಗ್ಗಿದ್ದು. ಆಯುರ್ವೇದಿಕ್ ಪದ್ದತಿ, ನಾಟಿ ಔಷಧಿ ಇಂಪ್ರೂವ್ ಆಗಿ ಹೊಟ್ಟೆಗೆ ಕೆಮಿಕಲ್ ಬೀಳುವುದು ಸ್ವಲ್ಪ ಕಡಿಮೆ ಆಗಿದ್ದದ್ದು ಈ ವರ್ಷ ಮತ್ತೆ ಮೊದಲಿನ ಜೀವನ ವಿಧಾನ  ನಿಧಾನವಾಗಿ ವಕ್ಕರಿಸ ತೊಡಗಿತ್ತು. ಸಭೆ ಸಮಾರಂಭ ಜಾತ್ರೆ ತೇರು ಪ್ರಾರಂಭ ಆಗಿತ್ತು. ಸಾರ್ವಜನಿಕ ಕಾರ್ಯಕ್ರಮಗಳು ಮತ್ತೆ ಸೇರಿದ್ದವು. ಜನತೆಯ ಕ್ಯೂ ಎಲ್ಲೆಡೆ ಇತ್ತು. ಕೆಲವರು ಮಾಸ್ಕ್ ಬಳಸಿದರೆ ಮತ್ತೆ ಕೆಲವರು ಮರೆತಿದ್ದರು. ಗುಂಪು ನೃತ್ಯಗಳು, ಮನೋರಂಜನಾ ಕಾರ್ಯಕ್ರಮಗಳು, ಥಿಯೇಟರ್ ಗಳು, ಮಾಲ್ ಗಳಿಗೆ ಜನ ನುಗ್ಗ ತೊಡಗಿದ್ದರು. 





 ಇನ್ನೇನು ಕರೋನ ಕಾಲದ ಭಯ ಮರೆಯಬೇಕು, ಅಷ್ಟು ಹೊತ್ತಿಗೆ ಇಂಜೆಕ್ಷನ್, ಮದ್ದು, ಮಾತ್ರೆ , ಬೂಸ್ಟರ್ ಡೋಸ್ ಎಲ್ಲಾ ಹಳೆಯ ವಿಧಾನವಾಗಿ ಹೋಗಿ ಮೂಗಿನ ಮೂಲಕ ಪಡೆಯುವ ಲಸಿಕೆ ಬಂದು ಬಿಡ್ತು! ಇನ್ನು ಮುಂದೆ ಅದೆಲ್ಲಿಗೆ ಚುಚ್ಚುವ ಲಸಿಕೆಗಳು ಬರ್ತಾವೋ ಆ ದೇವರಿಗೇ ಗೊತ್ತು, ಮತ್ತು ಕರೋನ ವೈರಸ್ ಬಿಡುವ ಚೈನಾಕ್ಕೆ ಗೊತ್ತು.

ವರ್ಷದ ಮೊದಲನೇ ದಿನವೇ ಇಡೀ ವರ್ಷಕ್ಕೆ ಬೇಕಾದ ಪ್ರತಿ ತಿಂಗಳ ಹಾಗೂ ವರ್ಷದ ಟಾರ್ಗೆಟ್ ಇಟ್ಟುಕೊಳ್ಳೋಣ. ಅದಕ್ಕೆ ಸರಿಯಾಗಿ ಗುರಿ ತಲುಪಲು ಮುನ್ನಡೆಯೋಣ. ಎಲ್ಲಕ್ಕಿಂತ ಮೊದಲು ಆರೋಗ್ಯವೇ ಭಾಗ್ಯ. ನೀವೇನಂತೀರಿ?

———————————–


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

Leave a Reply

Back To Top