ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಅನಸೂಯ ಜಹಗೀರದಾರ

c

ನಮ್ಮ ಮಾತು ಎಂದೆಂದಿಗೂ ಮುಗಿಯದಿರಲಿ
ರಸಮಯ ಗಳಿಗೆ ಹೀಗೆ ಮುಂದುವರಿಯಲಿ

ಇದಿರು ಮಾತು ಮನದಲಿ ಹೂತು ಪೆಡಸು ತಂದೀತು
ಸದಾ ಸಾಥ್ ಕೊಡುವ ಅಭಿಮತ ತೀರದಿರಲಿ

ಜೊತೆ ಹೆಜ್ಜೆಯಲ್ಲೂ ತಗ್ಗು ದಿಮ್ಮಿ ನಡೆ ಗೊತ್ತಿದೆ
ನಿಂತು ಸಾವರಿಸಿಕೊಳ್ಳುವ ಪಾದ ನರಳದಿರಲಿ ಎ

ಪ್ರತಿ ತಿಂಗಳು ಕಾಣುವನೆ ಶಶಿಗೂ ಮೋಡ ಮರೆಯಿದೆ
ಮನದ ಮನೆಯ ಚಂದ್ರಿಕೆ ಮಸುಕಾಗದಿರಲಿ

ನಮ್ಮೆಲ್ಲ ಆಸೆ ಫಲಿಸೀತೆ ಈ ಭವದ ಜಂಜಡದಲಿ
ಗೊತ್ತಿದೆ ನಮಗೆ ಈ ಗ್ರಹಿಕೆ ಕೊನೆಯಾಗದಿರಲಿ

ತಮಾಷೆಗೂ ಆಡದಿರು ದೂರ ಸರಿವ ಮಾತನು
ಯಾವ ತೂಫಾನಿಗೂ ಪ್ರೀತಿ ದೋಣಿ ನಿಲ್ಲದಿರಲಿ

ಗಾಳಿ ಜಲ ಬೆಂಕಿ ಭೂಮ್ಯಾಕಾಶ ಅಸ್ತಿತ್ವ ನಾವಲ್ಲವೆ ಅನು
ನಮ್ಮ ಆಸ್ಮಿತೆ ನಮಗೆ ಈ ಗೌರವ ಸ್ಥಿರವಾಗಿರಲಿ


About The Author

2 thoughts on “ಅನಸೂಯ ಜಹಗೀರದಾರ-ಗಜಲ್”

  1. Sarasijaa Rajan

    ನಿಮ್ಮ ನಮ್ಮ ಈ ಕನಸುಗಳಿಗೆ ಭಾವನೆಗಳಿಗೆ ಎಂದಿಗೂ ಕೊನೆಯಿಲ್ಲದಿರಲಿ

  2. ಅನಸೂಯ ಜಹಗೀರದಾರ

    ಓಹ್..!! ಖುಶಿಯಾಯ್ತು ಮೇಡಮ್.ಧನ್ಯವಾದಗಳು.

Leave a Reply

You cannot copy content of this page

Scroll to Top