ವಿಶೇಷ ಲೇಖನ
ಶಿವಾನಂದ ತಗಡೂರು ಅವರ ಅರ್ಥಪೂರ್ಣ ಪತ್ರಿಕಾ ಮತ್ತು ಸಾಹಿತ್ಯದ ಕೆಲಸಗಳೂ..! —
ಈ ಮೊದಲು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ರಾಜ್ಯದಲ್ಲಿ ಇರುವ ಉಳಿದೆಲ್ಲಾ ಜಿಲ್ಲಾ ಪತ್ರಿಕಾ ಭವನಗಳ ನಿರ್ವಹಣೆಯು ಹೇಗಿತ್ತೋ, ಅದು ಈಗ ಬೇಡದ ವಿಷಯವು.
ಶ್ರೀಮಾನ್ಯ ಸಾಹಿತಿ ಮತ್ತು ಪತ್ರಕರ್ತರಾದ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ ಉಳಿದೆಲ್ಲಾ ‘ಜಿಲ್ಲಾ ಪತ್ರಕರ್ತರ ಪತ್ರಿಕಾ ಭವನ’ಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು, ಮತ್ತು ಮಾಡುತ್ತಿರುವುದು..!
ಅಲ್ಲದೇ ಈ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ಕೊಂದು ಅರ್ಥ ಬಂದದ್ದು ಈ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ.
ಇವರು ನಡೆಸಿಕೊಂಡು ಬರುತ್ತಿರುವ ಹಿರಿಯ ಅದೂ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಪತ್ರಕರ್ತರನ್ನು ಗುರುತಿಸಿ, ‘ಮನೆಯಂಗಳದಲ್ಲಿ ಮನದುಂಬಿ ನಮನ’ ಎಂಬ ಆ ಹಿರಿಯ ವಿಶ್ರಾಂತ ಸ್ಥಿತಿಯಲ್ಲಿರುವ ಪತ್ರಕರ್ತರಿಗೆ ಗೌರವ ಪೂರ್ವಕ ಸನ್ಮಾನವನ್ನು ಅವರ ಮನೆಯಂಗಳಕ್ಕೇ ಹೋಗಿ ಅವರಿಗೆ ಒಂದಷ್ಟು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತಿರುವುದು ಏನಿದೆಯಲ್ಲ, ಅದು ನಿಜಕ್ಕೂ ಅಭಿನಂದನಾರ್ಹವಾದ ವಿಷಯವಾಗಿದೆ..!
ಅಲ್ಲದೇ ಸಂಕಷ್ಟದಲ್ಲಿರುವ ರಾಜ್ಯದ ಪತ್ರಕರ್ತರಿಗೆ ಒಂದಷ್ಟು ಸಾಂತ್ವನದ ಸಹಾಯವನ್ನು ಮಾಡಿಸುತ್ತಿರುವುದು. ರಾಜ್ಯ ಸರ್ಕಾರದಿಂದ ನಿಜವಾದ ಪತ್ರಕರ್ತರ ಗೋಳುಗಳಿಗೆ ಸಹಕಾರಿಯಾಗಿ ನಿಂತಿರುವುದು ನಿಜಕ್ಕೂ ಅನನ್ಯ..!
ಇಷ್ಟೇ ಅಲ್ಲದೇ ಪತ್ರಿಕಾ ವೃತ್ತಿಯಲ್ಲಿಯೇ ಯಾವ್ಯಾವದೋ ಕಾರಣದಿಂದ ಮೃತರಾದ ಪತ್ರಕರ್ತರ ಕುಟುಂಬಗಳಿಗೆ ಒಂದಷ್ಟು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಂದ ಸಹಾಯವನ್ನು ಮಾಡಿಸುತ್ತಿರುವುದೂ ನಿಜವಾಗಿಯೂ ‘ಮಾನವೀಯ ಮೌಲ್ಯ’ಗಳನ್ನು ಎತ್ತಿಹಿಡಿಯುವ ಕೆಲಸಗಳೇ ಆಗಿವೆ..!
ಹೀಗೆಯೇ ‘ಅತ್ಯಮೂಲ್ಯ ಮಾನವೀಯ ಮೌಲ್ಯಗಳ’ ಕೆಲಸಗಳು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ ನಡೆಯುತ್ತಿರುವುದು..!
ಇಷ್ಟೇ ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ‘ಪತ್ರಿಕಾ ಭವನ’ಗಳಾದದ್ದು ಈ ಶಿವಾನಂದ ತಗಡೂರು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೇಲೆಯೇ..!
ಹಾಗೆಯೇ ರಾಜ್ಯದ ಎಲ್ಲಾ ಜಿಲ್ಲೆಗಳ ‘ಪತ್ರಿಕಾ ಭವನ’ ನಿರ್ಮಾಣವಾದ ಬಗೆಯನ್ನು ಒಮ್ಮೆ ಹಾಗೆಯೇ ನೋಡಿರಿ. ಅದು ಹೀಗಿದೆ..!
ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಿಕಾ ಭವನ ನಿರ್ವಹಣೆಯನ್ನು ಕೇವಲ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವು ಮಾಡುತ್ತಿದೆ. ಅದೂ ಸಾಹಿತಿ ಮತ್ತು ಪತ್ರಕರ್ತ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ..!
1932 ರಲ್ಲಿ ಡಿ.ವಿ.ಗುಂಡಪ್ಪ ಅವರಿಂದ ಸ್ಥಾಪನೆಯಾದ ಸಂಘವು ರಾಜ್ಯದಾದ್ಯಂತ ಇನ್ನೂರಕ್ಕೂ ಹೆಚ್ಚು ಶಾಖೆಗಳನ್ನು ಈಗ ಹೊಂದಿದೆ. ಎಂಟು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸಂಘದ ಸದಸ್ಯರಾಗಿದ್ದಾರೆ..!
ಪತ್ರಕರ್ತರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ರಾಜ್ಯದ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವು. ಅದೂ ಶಿವಾನಂದ ತಗಡೂರು ಅವರ ಪತ್ರಿಕೋದ್ಯಮದ ಒಳತಿನ ಕಾರಣಕ್ಕೆ..!
ಬಿ.ಎಸ್.ಯಡಿಯೂರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಆ ಸಮಯದಲ್ಲಿ ರಾಜ್ಯದ 25 ಜಿಲ್ಲಾ ಪತ್ರಿಕಾ ಭವನಗಳಿಗೆ ತಲಾ 25 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಬೀದರ್ ಜಿಲ್ಲೆಯ ಪತ್ರಿಕಾ ಭವನಕ್ಕೂ ಅದೇ ಸಮಯದಲ್ಲಿ 25 ಲಕ್ಷ ಅನುದಾನ ಬಂದಿತ್ತು. ಇಲ್ಲಿಯ ಜನಪ್ರತಿನಿಧಿಗಳ ಉದಾರ ಮನೋಭಾವದಿಂದ ಬೀದರ್ ಜಿಲ್ಲಾ ಕೇಂದ್ರದಲ್ಲಿ ಅತ್ಯುತ್ತಮ ಕಟ್ಟಡ ನಿರ್ಮಾಣವಾಗಲು ಕಾರಣವಾಗಿತ್ತು. ಈ ಉದಾರತೆಗೆ ‘ಕಾರ್ಯನಿರತ ಪತ್ರಕರ್ತರ ಸಂಘ’ವು ಕೃತಜ್ಞತೆ ಸಲ್ಲಿಸುತ್ತದೆ.
‘ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಕೋವಿಡ್ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಬೀದರ್ ನ ಫೋಟೊ ಗ್ರಾಫರ್ ಕುಟುಂಬಕ್ಕೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಮನವಿ ಮೇರೆಗೆ 5 ಲಕ್ಷ ರೂಪಾಯಿ ಹಣದ ಆರ್ಥಿಕ ನೆರವು ಕೊಡಿಸಿದ್ದಾರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು..!
ಪ್ರಸ್ತುತವಾಗಿ ‘ವಿಜಿಟಿಂಗ್ ಕಾರ್ಡ್’ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ತರಬೇತಿ ಹಾಗೂ ಅನುಭವ ಇಲ್ಲದವರೂ ಬರೀ ‘ಲೊಗೊ’ವನ್ನು ಹಿಡಿದುಕೊಂಡು ಬಂದು ಪತ್ರಿಕಾ ರಂಗದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅದನ್ನು ಪ್ರತಿಯೊಬ್ಬರೂ ತಡೆಯಬೇಕು’ ಮೊದಲು..!
ಪತ್ರಕರ್ತರ ವೃತ್ತಿ ಪವಿತ್ರವಾದದ್ದಾಗಿದೆ. ಪತ್ರಕರ್ತರು ನೊಂದವರ ಪರವಾಗಿ ಧ್ವನಿಯಾಗಿ ನಿಲ್ಲಬೇಕು. ಹೃದಯದಲ್ಲಿ ನ್ಯಾಯಾಧೀಶ ಹಾಗೂ ಪತ್ರಕರ್ತ ಇದ್ದಾಗ ಮಾತ್ರ ಸಮಾಜ ಗುರುತಿಸುವಂತಹ ಕೆಲಸ ಮಾಡಲು ಸಾಧ್ಯವಾಗುತ್ತದೆ..! ಪತ್ರಕರ್ತರು ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.!!
ಸುದ್ದಿ ಮನೆಯಲ್ಲಿರುವವರೆಲ್ಲರೂ ಪತ್ರಕರ್ತರೇ. ಅವರಲ್ಲಿ ಒಡುಕು ಮೂಡಬಾರದು. ಸಂಪಾದಕರ ಸಂಘ ಹಾಗೂ ಪತ್ರಕರ್ತರ ಸಂಘದ ಮಧ್ಯೆ ಭಿನ್ನಾಭಿಪ್ರಾಯಗಳು ಇರಬಾರದು. ಹಿಂದೆ, 56 ಕೋಟಿ ರೂಪಾಯಿ ಜಾಹೀರಾತು ಬಿಲ್ ಬಾಕಿ ಇದ್ದಾಗ ಸಂಪಾದಕರ ಸಂಘದವರು ಕೆಯುಡಬ್ಲ್ಯೂಜೆ ಬಳಿ ಮನವಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರ ಸಂಘವು ಮುಖ್ಯಮಂತ್ರಿಗೆ ಮನವಿ ಮಾಡಿ ಜಾಹೀರಾತು ಬಿಲ್‍ಗಳನ್ನು ಬಿಡುಗಡೆ ಮಾಡಿಸಿತ್ತು. ಹೀಗೆಯೇ ಇಂತಹ ಪತ್ರಕರ್ತರ ಕೆಲಸಗಳಿಗೆ ಕಟಿಬದ್ಧರಾಗಿ ನಿಂತಿದ್ದಾರೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು..!
ಪತ್ರಕರ್ತರು ಸಮಾಜಮುಖಿಯಾಗಿ ನಿಲ್ಲಬೇಕು ಎಂಬುದಕ್ಕೆ ಇಡೀ ನಾಡಿಗೆ ಚಿರಪರಿಚಿತರಾದ ಶಿವಾನಂದ ತಗಡೂರ ಅವರೇ ನೇರ ಸಾಕ್ಷಿಯಾಗಿದ್ದಾರೆ. ಕೋವಿಡ್ ಮೊದಲು ಹಾಗೂ ಎರಡನೇ ಅವಧಿಯಲ್ಲಿ ನಾಡಿನ ಸುಮಾರು ಐವತ್ತಕ್ಕೂ ಅಧಿಕ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ‘ಕೋವಿಡ್ ಪರಿಹಾರ ನಿಧಿ’ಯನ್ನು ಕೊಡಿಸುವುದಲ್ಲದೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯದ ನೂರೈವತ್ತಕ್ಕೂ ಅಧಿಕ ಪತ್ರಕರ್ತರಿಗೆ ವೈದ್ಯಕೀಯ ನೆರವು ಕೊಡಿಸುವ ಕಾರ್ಯವನ್ನೂ ಈ ಶಿವಾನಂದ ತಗಡೂರ ಅವರು ಮಾಡಿದ್ದಾರೆ..!
ಅವರ ಮಾರ್ಗದರ್ಶನದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಹೆಮ್ಮರವಾಗಿ ಬೆಳೆದು ನಿಂತಿದೆ ಈಗ. ಸುದ್ದಿ ಮನೆಯಲ್ಲಿ ಕೆಲಸ ಮಾಡುವ ನಾವೆಲ್ಲರೂ ರಾಜ್ಯದ ಪತ್ರಕರ್ತರೆಲ್ಲರೂ ಅವರ ಮಾರ್ಗದರ್ಶನವನ್ನು ಪಡೆಯುತ್ತಾ ಮುಂದೆ ಸಾಗಬೇಕು..! ಆಗಲೇ ಒಂದು ಅರ್ಥಪೂರ್ಣ ‘ಸುದ್ದಿ ಮನೆ’ಯ ಕೆಲಸವನ್ನು ಮಾಡಲು ಸಾಧ್ಯವು ಎಂಬುದೇ ನನ್ನ ಅಭಿಪ್ರಾಯವಾಗಿದೆ..!
ಸತ್ಯ, ನಿಷ್ಠೆ ಹಾಗೂ ಪ್ರಾಮಾಣಿಕ ಪತ್ರಕರ್ತರಿಗೆ ಸಮಾಜದಲ್ಲಿ ಯಾವತ್ತೂ ಬೆಲೆ ಇದ್ದೇ ಇರುತ್ತದೆ. ನೈಜ ಪತ್ರಕರ್ತರಾದವರು ತಮ್ಮ ವೃತ್ತಿ ಧರ್ಮ ಪಾಲಿಸಲು ಸದಾ ಗಾಂಭಿರತೆಯಿಂದಿರಬೇಕಾಗುತ್ತದೆ. ಸತ್ಯಕ್ಕೆ ಸನಿಹ ಸುದ್ದಿಗಳು ಬಿತ್ತರಿಸುವ ಕಾಳಜಿ ಪತ್ರಕರ್ತರಲ್ಲಿರಬೇಕಾಗುತ್ತದೆ. ಇದನ್ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಸದಾ ಈ ನವನವೀಅವರೂತ್ರಕರ್ತರಿಗೆ ಹೇಳುತ್ತಲೇ ಬರುತ್ತಿರುವುದು..!
ಇಂತಹ ಶಿವಾನಂದ ತಗಡೂರು ಅವರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ತಗಡೂರು ಗ್ರಾಮದಲ್ಲಿ 1971 ಜುಲೈ 1 ರಂದು ಜನಿಸಿದರು.
1990 ರಲ್ಲಿ ರೈತ ಚಳವಳಿಯತ್ತ ಆಕರ್ಷಣೆ. ಗೊರೂರು ಹೇಮಾವತಿ ಯೋಜನೆಯಿಂದ ತುಮಕೂರು ಜಿಲ್ಲೆಗೆ ನೀರು ಹರಿಸಲು ಭೂಮಿಯ 200 ಅಡಿ ಆಳದಲ್ಲಿ ನಿರ್ಮಾಣ ಮಾಡಿದ ಬಾಗೂರು-ನವಿಲೆ ಸುರಂಗದಿಂದಾಗಿ ಸಂತ್ರಸ್ತರಾದ ಹಳ್ಳಿಗಳು/ ಜನತೆಯ ಪರವಾಗಿ ಒಂದು ದಶಕಗಳ ಕಾಲ ನಿರಂತರ ಹೋರಾಟ. ಸಮಿತಿಗಳ ಒಕ್ಕೂಟದ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಣೆ.
1990 ರಲ್ಲಿ ಹಾಸನ ಜಿಲ್ಲೆಯ ಜನಮಿತ್ರ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ. ನಂತರ ಜ್ಞಾನದೀಪ, ಈ ವಾರ ಕರ್ನಾಟಕ, ಜನವಾಹಿನಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ.
1999ರ ವಿಜಯಕರ್ನಾಟಕ ಪ್ರಾರಂಭದಿಂದಲೂ 12 ವರ್ಷಗಳ ಕಾಲ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿ, 2012 ರಿಂದ ವಿಜಯವಾಣಿ ದಿನಪತ್ರಿಕೆಯಲ್ಲಿ ಹಿರಿಯ ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2006 ರಲ್ಲಿ ಪ್ರಪ್ರಥಮ ಬಾರಿಗೆ ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ ಹೆಗ್ಗಳಿಕೆ.
ಬೇಲೂರಿನ ರಾಜ್ಯ ಮಟ್ಟದ ಪತ್ರಕರ್ತರ ಸಂಘದ ಪದಾಧಿಕಾರಿಗಳ ಸಮಾವೇಶ, ಕರ್ನಾಟಕ ಮಾಧ್ಯಮ ಅಕಾಡೆಮಿ ಜತೆಯಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮ
2011 ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ
2014 ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಸ್ಥಾನ ಉಪಾಧ್ಯಕ್ಷರಾಗಿ ಆಯ್ಕೆ
2018-21 ಅವಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆ
2019 ಏಷ್ಯಾ ಅಂತರಾಷ್ಟ್ರೀಯ ಒಕ್ಕೂಟದ ಖಜಾಂಚಿಯಾಗಿ ಆಯ್ಕೆ
2019 ರಲ್ಲಿ ಮೈಸೂರಿನಲ್ಲಿ (ಸುತ್ತೂರು) ಕೆಯುಡಬ್ಲ್ಯೂಜೆ 34ನೇ ರಾಜ್ಯ ಪತ್ರಕರ್ತರ ಸಮ್ಮೇಳನ
2020ರಲ್ಲಿ ಮಂಗಳೂರಿನಲ್ಲಿ ಕೆಯುಡಬ್ಲ್ಯೂಜೆ 35ನೇ ರಾಜ್ಯ ಪತ್ರಕರ್ತರ ಯಶಸ್ವಿ ಸಮ್ಮೇಳನ
ಪ್ರಶಸ್ತಿಗಳು :
ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ವರದಿಗಾಗಿ ಕೆಯುಡಬ್ಲ್ಯೂಜೆ ನೀಡುವ ಖಾದ್ರಿ ಶಾಮಣ್ಣ ಪ್ರಶಸ್ತಿ, ಅತ್ಯುತ್ತಮ ಮಾನವೀಯ ವರದಿ, ಅತ್ಯುತ್ತಮ ಕ್ರೀಡಾ ವರದಿ ಸೇರಿದಂತೆ ಹಲವು ಪ್ರಶಸ್ತಿ. ಪತ್ರಿಕೋದ್ಯಮ ಸಾಧೆನೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ. ಮದರ್ ತೆರೇಸಾ ಪ್ರಶಸ್ತಿ, ಸಂಘ ಸಂಸ್ಥೆಗಳಿಂದ ಸನ್ಮಾನ
ಪ್ರವಾಸ :
ಸಿಂಗಾಪುರ, ಶ್ರೀಲಂಕಾ, ದುಬೈ, ಅಬುದಾಬಿ, ಶಾರ್ಜಾ, ಮಾರಿಷಸ್ ಸೇರಿದಂತೆ ಹಲವಾರು ಬಾರಿ ಪತ್ರಕರ್ತರ ಸಂಘಟನೆ ವಿದೇಶ ಪ್ರವಾಸ.
ಶ್ರೀಲಂಕಾ ಪತ್ರಕರ್ತರ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗಿ, ಶ್ರೀಲಂಕಾ ಪ್ರಧಾನಿ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಯಾಗಿ
ಮಾಧ್ಯಮ ಕ್ಷೇತ್ರ :
1990 ರಲ್ಲಿಯೇ ಹಾಸನ ಜಿಲ್ಲೆಯ ಜನಮಿತ್ರ ದಿನ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶ, ಜ್ಞಾನದೀಪ, ಈ ವಾರ ಕರ್ನಾಟಕ, ಜನವಾಹಿನಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ವರದಿಗಾರನಾಗಿ ಸೇವೆ.
1999 ವಿಜಯಕರ್ನಾಟಕ ಪತ್ರಿಕೆ ಪ್ರಾರಂಭದಿಂದಲೂ 12 ವರ್ಷಗಳ ಕಾಲಹಿರಿಯ ವರದಿಗಾರನಾಗಿ ಸೇವೆ.
2012 ವಿಜಯವಾಣಿ ಪ್ರಾರಂಭವಾದ ಬಳಿಕ ಬೆಂಗಳೂರಿನಲ್ಲಿ ಹಿರಿಯ ವಿಶೇಷ ವರದಿಗಾರರಾಗಿ ಸೇರ್ಪಡೆ.
2004-2008 ರವರೆಗೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 4 ವರ್ಷ ಕಾರ್ಯನಿರ್ವಹಣೆ.
ಅಧ್ಯಕ್ಷರಾಗಿದ್ದ ಅವಧಿಯಲ್ಲಿ /2007-08)ರಲ್ಲಿ ಹಾಸನ ಜಿಲ್ಲಾ ಪತ್ರಕರ್ತರ ಬಹಳ ವರ್ಷದ ಕನಸಾಗಿದ್ದ ಸುಸಜ್ಜಿತ ವ್ಯವಸ್ಥೆಯುಳ್ಳ 1 ಕೋಟಿ ಅಂದಾಜು ವೆಚ್ಚದ ಪತ್ರಕರ್ತರ ಭವನ ನಿರ್ಮಾಣ.
# ಪತ್ರಕರ್ತರ ಸಂಗಾತಿಯು ಈ ಶಿವಾನಂದ ತಗಡೂರು ಅವರೂ..!
ಈಗ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಮಾಡಲು ಅಣಿಯಾಗಿದ್ದಾರೆ. ಅವರು ‘ಕರ್ನಾಟಕ ಪತ್ರಕರ್ತರ ಸಂಘ’ದ ಅಧ್ಯಕ್ಷರಾಗಿ ‘ಮನೆಯಂಗಳದಲ್ಲಿ ಮಾತುಕತೆ’ ಎಂಬ ಹಿರಿಯ ಪತ್ರಕರ್ತರನ್ನು ಅವರ ಮನೆಯಂಗಳದಲ್ಲೇ ಹೋಗಿ ಸನ್ಮಾಸಿಸುವ ಪರಿಯು ಅದ್ಭುತವಾಗಿದೆ.
ಅಲ್ಲದೇ ಪತ್ರಿಕಾ ಕಾರ್ಯದಲ್ಲಿ ಒಂದಿಷ್ಟು ಅನಾರೋಗ್ಯದ ಸಮಸ್ಯೆಗೆ ಈಡಾದ ರಾಜ್ಯದ ಪತ್ರಕರ್ತರ್ಯಾರೇ ಇರಲಿ, ಅವರಿಗೆ ರಾಜ್ಯ ಸರ್ಕಾರದಿಂದ ಸಹಾಯವನ್ನು ಮಾಡಿಸುವ ಪರಿಯೂ ಅದ್ಭುತವಾದದದ್ದಾಗಿದೆ. ಅಲ್ಲದೇ ಪತ್ರಕರ್ತರ ಮನೆಯ ಯಾರೇ ಇರಲಿ ಅವರು ಅನಾರೋಗ್ಯದ ಸಮಸ್ಯೆಯಲ್ಲಿ ಸಿಲುಕಿದರೆ ಅವರಿಗೂ ಒಂದಿಷ್ಟು ಸಹಾಯ ಮತ್ತು ಸಹಕಾರವನ್ನು ಕೊಡಿಸಿತ್ತಿರುವುದು ಬಹು ಅರ್ಥಪೂರ್ಣ ಇದೆ. ಮುಖ್ಯವಾಗಿ ಈಗ ಈ ಸಕ್ರಿಯ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯಗಳನ್ನು ಕೊಡಿಸಲು ಮುಂದಾಗಿರುವುದು ಈ ಶಿವಾನಂದ ತಗಡೂರು ಅವರ ತಮ್ಮ ಪತ್ರಿಕಾಧರ್ಮಕ್ಕೆ ಅಂಟಿಕೊಂಡಿರುವ ಅದ್ಭುತ ಕೆಲಸಗಳ ಕಾರ್ಯಗಳೂ ಆಗಿದೆ..!
ಇಷ್ಟೇ ಅಲ್ಲದೇ ಈ ಶಿವಾನಂದ ತಗಡೂರು ಅವರು ರಾಜ್ಯದ ತುಂಬೆಲ್ಲಾ ಪತ್ರಕರ್ತರ ಹಾಗೂ ಸಾಹಿತಿಗಳ ನಾನಾ ಸಮಸ್ಯೆಗಳಿಗೆ ಸ್ಪಂದಿಸುವ ಗುಣಗಳನ್ನು ಹೊಂದಿದವರಾಗಿದ್ದಾರೆ..!
ತಮ್ಮ ಕೆಲಸಗಳ ಜೊತೆಗೆ ಈಗ ಬೆಳಗಾವಿ ಅಧಿವೇಶನದ ತಮ್ಮ ಪತ್ರಿಕಾ ವರದಿಗಾರಿಕೆಯ ಕೆಲಸಗಳ ಜೊತೆಗೇ ರಾಜ್ಯ ಪತ್ರಕರ್ತರ ಮತ್ತು ಸಾಹಿತ್ಯದ ಕೆಲಸಗಳನ್ನು ಮಾಡುತ್ತಲೇ ಇರುವುದು ಅತ್ಯದ್ಭುತವಾಗಿದೆ..!
ಕೆ.ಶಿವು.ಲಕ್ಕಣ್ಣವರ