ನಿಂಗಮ್ಮ ಭಾವಿಕಟ್ಟಿ-ಹೈಕುಗಳು

ಕಾವ್ಯ ಸಂಗಾತಿ

ಹೈಕುಗಳು

ನಿಂಗಮ್ಮ ಭಾವಿಕಟ್ಟಿ

ಟು ಟು ಗೆ ಟು ತ್ರೀ
ಖೋ ಅಂತು ಟು ಟು ಪಾಪ
ಔಟಾಗಿ ಹೋಯ್ತು

ಕಟ್ಟಿ ಹಾಕಿದ್ದೆ
ಕ್ಯಾಲೆಂಡರ್ ಲಿ ಆದ್ರೂ
ಕಳೆದು ಹೋಯ್ತು.

ಆದದ್ದಾಯಿತು
ಆಗುವುದೆಡೆ ನೋಡು
ಆಗದ್ದು ಮಾಡು.

ನಿಗದಿಯಾದ
ಆಗು ಹೋಗುಗಳಿಗೆ
ನಿರ್ಧಾರವೇಕೆ?.

ಕಾಯೋದೆ ಆಯ್ತು
ಒಳ್ಳೆ ದಿನಕೆ, ಇಂದೆ
ಅಲ್ಲವೇ ಅದು.


ನಿಂಗಮ್ಮ ಭಾವಿಕಟ್ಟಿ

Leave a Reply

Back To Top