ಹೊಸ ವರ್ಷದ ವಿಶೇಷ-2023

ಮಾಸ್ತಿ ಬಾಬು

ನನ್ನ ನಾಡಿನ‌ ಹೆಮ್ಮೆಯ ಹಬ್ಬ

ಬಂದಿದೆ ಬಂದಿದೆ ನಮ್ಮಯ ಹಬ್ಬ
ಅದುವೆ ಕನ್ನಡ ನಾಡಿನ ಹಬ್ಬ,
ಬನ್ನಿರಿ ಎಲ್ಲರು ಸೇರೋಣ
ಕನ್ನಡ ದೀಪವ ಹಚ್ಚೋಣ,
ಕಲಿ ವೀರರ ಕೆಚ್ಚೆದೆಯಲಿ
ಹರಿಯಲಿ ನಮ್ಮಯ ಕನ್ನಡ ಕಂಪು,
ಎಲ್ಲರ ಮನಕೆ ಸಂತಸ ನೀಡಿ
ನಾಡಿನ ಬಾವುಟ ಹಾರುತಲಿರಲಿ,
ನಮ್ಮಯ ತಾಯಿ
ಭುವನೇಶ್ವರಿಯ
ಮಹಿಮೆಯ ಎಲ್ಲೆಡೆ ಸಾರೋಣ,
ಕನ್ನಡಿಗರಲ್ಲದ ಜನರಲಿ
ಕೂಡಿ ನಮ್ಮಯ ಭಾಷೆಯ ಕಲಿಸೋಣ,
ಶೂರರು‌ ನಾವೇ ಧೀರರು ನಾವೇ
ಎಂಬುದ ಲೋಕಕೆ ತೋರೋಣ,
ಚಿನ್ನದ ನಾಡು ಗಂಧದ ಬೀಡಿನ ಇತಿಹಾಸವನು ತಿಳಿಸೋಣ.


Leave a Reply

Back To Top