ಹೊಸ ವರ್ಷದ ವಿಶೇಷ-2023

ಸುರೇಶ ತಂಗೋಡ

ನಿತ್ಯದಂತೆಯೇ
ಮೂಡಣದಿ ರವಿಯುದಯ
ಹಕ್ಕಿ-ಪಕ್ಷಿಗಳ ಕಲರವ
ಬೆಳಗು ಮೂಡಿತು
ಆದರೇ,
ತನು-ಮನಕೆ ಹೊಸತು ಭಾವ.

ಅದೇ ಕೆಲಸ
ಅದೇ ನಿಮಿಷ
ನವನವೀನವಾಗಿದೆ ಮಾತ್ರ
ಕಾರಣ
ಎಲ್ಲದಕ್ಕೂ ಹೊಸ ಸ್ಪರ್ಶ ಈ ಹರುಷ.

ಹೊಸ ಆಲೋಚನೆ,ಆಕಾಂಕ್ಷೆಗಳು
ಚಂದದನುಭೂತಿಯ ಪರಿಕಲ್ಪನೆಗಳು
ಹೊಸತು ಹೊರಹೊಮ್ಮುವ ಆಶಯವಿದು
ಮೂಲವೊಂದೇ
ಹೊಸ ಹರುಷಕೆ ಹೊಸ ವರುಷವು ಸಕಾರಣ.

ಪ್ರತಿ ನಿತ್ಯವಾಗಲಿ ಹೊಸ ವರುಷ
ಸುಖದ ಬುಗ್ಗೆ ಹರಡಲಿ ಪ್ರತಿ ನಿಮಿಷ
ಮತ್ತೆ ಮತ್ತೆ ಬರಲಿ ಹೊಸ ವರ್ಷ
ಸಂಭ್ರಮಿಸೋಣ
ಪ್ರತಿ ಕ್ಷಣವು ನಮ್ಮದೆಂದು ಈ ಬದುಕ.


Leave a Reply

Back To Top