ಅನುವಾದಿತ ಕವಿತೆ ಇಂಗ್ಲೀಷ್ ಭಾಷೆಯಿಂದ

ಅನುವಾದ ಸಂಗಾತಿ

ಧ್ವನಿ ರಹಿತರ ಧ್ವನಿ ನಾನು

ಮೂಲ ಆಂಗ್ಲ:ಇಲ್ಲಾ ವೀಲ್ಹರ್ ವಿಲ್ಕಾಕ್ಸ್
ಕನ್ನಡಕ್ಕೆ:ಬಾಗೇಪಲ್ಲಿ ಕೃಷ್ಣಮೂರ್ತಿ

ಲೆಕ್ಕವಿಲ್ಲದಷ್ಟು ದೇವತೆಗಳು
ಲೆಕ್ಕವಿಲ್ಲದಷ್ಟು ಧರ್ಮಗಳು
ಸುರುಳಿಯಂತೆ ಒಂದೆಡೆಯೇ ಸುತ್ತುವ ಹಲವಾರು ಹಾದಿಗಳು

ಹಿಡಿ ಕರುಣೆಯ ತೋರುವ ಕಲೆಗಾರಿಕೆಯು ಅವಶ್ಯವಿರುವ ಈ ಜಗಕೆ

ಧ್ವನಿರಹಿತರ ಧ್ವನಿಯಾಗುವೆ ನಾ,

ನನ್ಮೂಲಕ ಮೂಗನು ಸಹ ಮಾತನಾಡಬಲ್ಲ,
ಅಶಕ್ತರ ಸಂಕೇತವಾದ ‘ತಪ್ಪು ನ್ನು’ ಈ ಕಿವಿಡು ಸಮಾಜ
ಕೇಳಿಸಿಕೊಳ್ಳುವವರಿಗೆ

ಧ್ವನಿರಹಿತರ ಧ್ವನಿಯಾಗುವೆ ನಾ,

ಹಾದಿ ಬದಿಯ ಚರಂಡಿ ಕೊಳಕಿನ ಬಂಧನದಿಂದ
ಮೃಗಾಲಯ ಕುದುರೆಲಾಯದಂತ
ನರಳಾಟದಿಂದ
ನನ್ನ ಅಪ್ತ ‘ಅಶಕ್ತರು’ ಚಿತ್ರಹಿಂಸೆಗೊಳಗಾಗುವ ‘ಶಕ್ತರ’ ವಿರುದ್ಧ

ಅಶಕ್ತರ ಧ್ವನಿಯಾಗುವೆ ನಾನು.


ಇಲ್ಲಾ ವೀಲ್ಹರ್ ವಿಲ್ಕಾಕ್ಸ್

ಮೊದಲ ಪ್ರಾಪಂಚಿಕ ಯುದ್ಧ ಸಮಯದ ನಂತರ ಈಕೆ ತನ್ನ “ಧಿ ಸ್ಟೆವ್ಡೊರ್ಸ್” ( ಜಹಜಿಗೆ ಸರಕುಗಳ ಏರಿಳಸುವ ಗುತ್ತಿಗೆದಾರ) ಎಂಬ ಪದ್ಯವನ್ನು ಎಲ್ಲಕಡೆ ವಾಚಿಸುತ್ತಾ ಪ್ರಸಿದ್ಧಳಾದಳು.
ಸಮಾಜದ ಕಡುಬಡವರ ಪರವಾಗಿ ಲೇಖನಿ ಅಸ್ತ್ರವ ಪ್ರಯೋಗಿಸಿದಳು.
ಈಕೆ ಮರಣದ ಮುನ್ನಾವರ್ಷದಿ ” The World and I” ಎಂಬ ಕೃತಿಯನ್ನು ಪ್ರಕಟಿಸಿದಳು.

Leave a Reply

Back To Top