ಅನುವಾದಿತ ಕವಿತೆ-ಎಂಮ್ಲಿ ಡಿಕಿನ್ಸನ್

ಅನುವಾದ ಸಂಗಾತಿ

ವ್ಯಸನ ತರುವ ಮಧುರ ಧ್ವನಿ

ಇಂಗ್ಲೀಷ್ ಮೂಲ:ಎಂಮ್ಲಿ ಡಿಕಿನ್ಸನ್
ಕನ್ನಡಕ್ಕೆ: ಬಾಗೇಪಲ್ಲಿ ಕೃಷ್ಣಮೂರ್ತಿ

ಲೋಕೋ ಭಿನ್ನರಚಿಃ ಎಂಬ ವಾಕ್ಯವಿದೆ. ಹುಯ್ಯೋ ಹುಯ್ಯೋ ಮಳೆರಾಯ ಎಂದು ಬೇಡುವ ನಮ್ಮ ಭಾರತೀಯ ರೈತ ನೊಂದೆಡೆ, ರೈನ್ ರೈನ್ ಗೋ ಆವೇ ಅದೂ ಏತಕೆ ? ಲಿಟ್ಟಲ್ ಜಾನಿ ಆಡುವುದಕ್ಕೆ ಹೇಳುವ ಜನಾಂಗ ಇನ್ನೊಂದೆಡೆ.

ಮುಂಜಾವಿನ ಎಳೆ ಸೂರ್ಯ ಕಿರಣಗಳುದಿಪ ಸಮಯದಿ ಕೋಗಿಲೆ ಮತ್ತು ಇತರ ಹಕ್ಕಿಗಳ ಧ್ವನಿಯಿಂದ ಮನಸೂರೆಗೊಂಡ ಕವಿಗಳ ಪದ್ಯಗಳು ಹಲವಾರು.

“ಗಿಡಗಂಟಿಗಳ ಕೊರಳೊಳಗಿಂದ ಹೊರಟಿತ್ತೋ ಗಾನ, ಬೆಳ್ಳನ ಬೆಳಗಾಯಿತು, ಮೊಡಿದನು ರವಿ ಮೂಡಿದನು” ಎಂಬ ಹಾಡುಗಳು ಹಲವಾರು.

ಈ ಭಾವನೆಗಳಿಗೆ ತದ್ವಿರುದ್ಧ ಎನಿಸುವಂತೆ “ಎಂಮ್ಲಿ ಡಿಕಿನ್ಸನ್” ಮರಣಾನಂತರ ವಿಮರ್ಶೆ ಗೊಳಗಾಗಿ ಉತ್ತಮ ವೆನಿಸಿ ಪ್ರಸಿದ್ಧಿವಾದ ಈ ಕೆಳಗೆ ಅನುವಾದಿಸಿರುವ ಪದ್ಯದಲಿ ” ಸುಮಧುರ ಧ್ವನಿ ದುಃಖ ತರುವ ಕಠೋರ ಶಬ್ಧವಾಗಿದೆ, ಸೌಂದರ್ಯ ಮತ್ತು ದುಃಖದ ಸಂಬಂಧ” ತಿಳಿಸುತ್ತದೆ. ಸ್ವಲ್ಪ ವಾಚ್ಯ ವೆನಿಸಬಹುದು, ಮೊಲ ಪದ್ಯವೇ ಹಾಗಿದೆ, ಸಾಧ್ಯವಾದಷ್ಟು ಸರಳ ಕವಿತೆ ಯಾಗಿಸಿರುವೆ ಆಕೆ ಪದ್ಯಕ್ಕೆ ಶೀರ್ಷಿಕೆ ನೀಡುತ್ತಿರಲಿಲ್ಲ. ಸೂಚನೆಗೆ ಸ್ವಾಗತವಿದೆ.

ಬಹಳ ದುಃಖ ತರವ ಸದ್ದು
ಹಾಗೂ ಸುಮಧುರ ಶಬ್ಧ ಮತ್ತು ಹುಚ್ಚುಹಿಡಿಸುವಂತಹ ಧ್ವನಿ ಎಂದರೆ –
ಮುಂಜಾನೆಯ ಹಕ್ಕಿಗಳ ಉಲಿ

ವಸಂತಕಾಲದ ಆರಂಭದಲಿ
ರಾತ್ರಿಯ ಸಿಹಿಮಯ ಅಂತ್ಯ ಕಾಲದಿ ಇದು ಕೇಳಿಬರುತ್ತದೆ

ಚೈತ್ರ-ವೈಶಾಖ ಮಾಸದ ಮಧ್ಯೆ ಚಳಿಗಾಲ ಸಂತಸದಿ ನಿರ್ಗಮಿಸುವಾಗ
ಎಂತವರೂ ಮರುಳು ಹೋಗುವ ಈ ಸಮಯದಿ ರಾಗಾಲಾಪ ಮಾಡುತ್ತವೆ

ಅವುಗಳ ಧ್ವನಿ,
ಅಂತಹುದೇ ಸಮಯದಿ ನಮ್ಮೊಡನಿದ್ದು ನಮ್ಮೊಂದಿಗೆ ಸುತ್ತಾಡಿದ ದಿವಂಗತರನೆಲ್ಲಾ ನೆನಪಿಗೆ ತರುತ್ತದೆ

ನಮ್ಮ ಅತ್ಯಂತ ಪ್ರೀತಿ ಪಾತ್ರರ ದೂರ ಮಾಡಿದ ಅತೀ ಕ್ರೂರಿ ಯಕ್ಷಿಣಿಗಾರ – ‘ಸಾವನ್ನು’ ನೆನಪಿಸುತ್ತದೆ

ನಮ್ಮಲ್ಲಿದ್ದ- ನಾವು ಕಳೆದುಕೊಂಡ ಸಕಲವನ್ನೂ ಜ್ಞಾಪಿಸುತ್ತದೆ.

ಆಗ ನಮಗೆ,
ಇವುಗಳ ಇಂಪಾದ ಗಾಯನ ‘ಅಪಾಯಕಾರಿ ಎಚ್ಚರಿಕೆಯ ಗಂಟೆ ‘ ಆಗಿ ‘ಇವು ಗಾನ ನಿಲ್ಲಿಸಲಿ’ ಎನಿಸುತ್ತದೆ.

“ಕಿವಿಗಳು” ಒಂದು ಮಾನವೀಯ ಹೃದಯವನ್ನು ಚೂಪಾದ ಚೂರಿ ಇರಿದಂತೆ ಇರಿಯಬಲ್ಲವು !

ನಾವುಗಳೆಲ್ಲಾ,
ಅಂತಹ ಅಪಾಯಕಾರಿ ಕಿವಿಗಳನು ಹೃದಯದ ಹಾದಿಯಲಿ,ಅದಕ್ಕೆ ಹತ್ತಿರವಿಲ್ಲದಿರಲೆಂದು ಬಯಸೋಣ.


2 thoughts on “ಅನುವಾದಿತ ಕವಿತೆ-ಎಂಮ್ಲಿ ಡಿಕಿನ್ಸನ್

  1. ಪರವಾಗಿಲ್ಲ ತುಂಬಾ ಸೊಗಸಾಗಿ ಮೂಡಿ ಬಂದಿದೆ ಕಾವ್ಯ ಅಭಿನಂದನೆಗಳು ಕವಿ ವರ್ಯರಿಗೆ

Leave a Reply

Back To Top