ಕಾವ್ಯ ಸಂಗಾತಿ
ಬುರುಡೆ ದಾಸರು
ಡಾ ಡೋ ನಾ ವೆಂಕಟೇಶ
ತಪ್ಪು ಒಪ್ಪುಗಳ ಸಂತೆ
ಖಾಲಿ ಖಾಲೀ ಕಂತೆ
ಬೆಪ್ಪರಾರೂ ಇಲ್ಲಿಲ್ಲ
ಬರೇ ಬೆರ್ಚಪ್ಪಗಳೆ ಅಲ್ಲೆಲ್ಲ
ಕಣ್ಣು ಮುಖ ಹಲ್ಲಿಲ್ಲದ
ಒಡಕು ಮಡಕೆಯ
ಬುರುಡೆ
ಬಿಡು ಪ್ರಸಾದ ಇವರೆಲ್ಲ
ಹಳಿಯಿಲ್ಲದ ರೈಲಿನ ಡ್ರೈವರ್ರು
ದಿನನಿತ್ಯ ನಮ್ಮ ನಿಮ್ಮೆಲ್ಲರ
ಮಧ್ಯೆ ಮಿಂಚುವ ಬರೆ
ಹೊಂಚು ಹಾಕುವ ಸಂಚುಗಳು
ಕನಸಲ್ಲಿ ಕಂಡ ಸಾಕ್ಷಾತ್ಕಾರಕ್ಕೆ
ನನಸಿನ ಮುಖವಾಡ ತೊಡಿಸಿ
ಧೂಪ ದೀಪಗಳ
ಮಂಗಳಾರತಿ ಎತ್ತುವರು
ನಮಗಾಗದವರು
ನಮ್ಮಿಂದ ಉಪಕೃತರು
ಕೃತಘ್ನರು
Very nice pappa
Thank you!
, super
Thank you