ಋಜುಹಾಕು ನಮ್ಮೊಲವಿಗೆ-ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ.

ಕಾವ್ಯ ಸಂಗಾತಿ

ಋಜುಹಾಕು ನಮ್ಮೊಲವಿಗೆ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಅಂಗಳದ ಮಳೆ ಹನಿಗೆ
ಗೊತ್ತಾತು ನಿನ್ನ ವಿಳಾಸ
ಮೇಘದೂತನಿಗೆ ಸಂಭ್ರಮವೀಗ
ಮುತ್ತಿಟ್ಟಂತೆ ಹಿಮದ ಕಳಶ

ಒಲವ ಚಿಟ್ಟೆಗೆ ಮೊಟ್ಟೆ ಒಡೆದು
ಹೊರ ಬರುವ ತವಕ
ನೂರು ಬಣ್ಣ ಹಸಿರು ಕಣ್ಣು
ಮೈ ಮನಗಳ ಪುಳಕ

ಪ್ರೇಮಿಗಳಿಗೆ ಮಂಜು ಹನಿಯ
ಚಿತ್ತಾರವೇ ಕೈಬರಹ
ಒಪ್ಪಿಬಿಡು ನನ್ನ ನಿವೇದನೆ
ನೀಡದೆ ಹಿಂಬರಹ

ಕಾಣಬೇಕು ನಿನ್ನ ಮುಖವ
ಹೃದಯದಿ ಬಚ್ಚಿಟ್ಟಿರುವೆ ಒಲವ
ದೂರವಾದರೂ ಕಾಣುತಿರುವೆ
ನೈದಿಲೆಯ ಪ್ರತಿಬಿಂಬದಿ ನಿನ್ನ ಮೊಗವ

ತಂಬೆಲರ ತುದಿಯಲ್ಲಿ
ಕಾಲೂರಿದೆ ಇಬ್ಬನಿ ಬರಹ
ಕಣ್ಮುಚ್ಚಿ ರುಜು ಹಾಕಿಬೀಡು
ಸಿಹಿಮುತ್ತಿಟ್ಟು ಬರುವೆ ಸನಿಹ


5 thoughts on “ಋಜುಹಾಕು ನಮ್ಮೊಲವಿಗೆ-ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ.

Leave a Reply

Back To Top