ಜಿ.ಎಸ್.ಶರಣು ಕವಿತೆ-ಪುಸ್ತಕ ಕೊಡಿ

ಕಾವ್ಯ ಸಂಗಾತಿ

ಪುಸ್ತಕ ಕೊಡಿ

ಜಿ.ಎಸ್.ಶರಣು

#Lightbox: Education+

    ಮತ ಮತ ಎಂದು ಹೇಳಿವಿರಿ
    ಕತ್ತಿ ಕುಡುಗೋಲು ಮಸೆಯುವಿರಿ
    ಧರ್ಮದ ರಕ್ಷಣೆ ಮಾಡ್ಬೇಕು ಅನ್ನುವಿರಿ
    ಹಿಂದುಳಿದ ಬಡವರ ಮಕ್ಳನ್ನ ಕೊಲ್ಲುವಿರಿ

    ಮತದ ಕಥೆಯಲ್ಲಿ ಬರುವನು
    ನಿಮ್ಮ ಪ್ರಕಾರ ದೇವನಲ್ಲವೇ
    ಆತನ ಕೈಗೆ ಕುಡುಗೋಲು ಕೋಡಿ
    ಆತನ ತಮ್ಮನ ಕೈಗೆ ಕತ್ತಿಯ ನೀಡಿ
    ಧರ್ಮ ರಕ್ಷಣೆಯ ಮಾಡಲು ನಿಲ್ಲಿಸಿ

    ನನ್ನ ಅಣ್ಣಂದಿರ ಕೈಗೆ ಪೆನ್ನು-ಪುಸ್ತಕ ಕೊಡಿ
    ವಿದ್ಯಾಭ್ಯಾಸ ಕೊಟ್ಟು ಓದು-ಬರಹ ಕಲಿಸಿ
    ದಯವಿಟ್ಟು ಕತ್ತಿ ಕುಡುಗೋಲು ನೀಡಬೇಡಿ
    ಅವರಲ್ಲಿ ಧರ್ಮದ ಅಮಲು ತುಂಬಬೇಡಿ

    ನಿಮ್ಮ ಧರ್ಮ ನಿಮ್ಮ ದೇವರಿಂದ
    ನನ್ನ ಅನೇಕ ಅಣ್ಣಂದಿರು ಸತ್ತೋಗಿದ್ದಾರೆ
    ನನ್ನ ಅನೇಕ ಅಕ್ಕಂದಿರು ಮನೆಬಿಟ್ಟೋಗಿದ್ದಾರೆ
    ಅಕ್ಕ, ಅಣ್ಣರ ನೆನಪಲ್ಲಿ ಅವರ ಹೆತ್ತವರು
    ಕೊರಗಿ ಕೊರಗಿ ಸಾಯುತ್ತಿದ್ದಾರೆ


    One thought on “ಜಿ.ಎಸ್.ಶರಣು ಕವಿತೆ-ಪುಸ್ತಕ ಕೊಡಿ

    Leave a Reply

    Back To Top