-ದಾಮಿನಿ.ಎಂ.ಜಿ.ಆರ್-ಹಾರ ತುರಾಯಿಗಳ ಆರ್ಭಟ,

ಕಾವ್ಯ ಸಂಗಾತಿ

ಹಾರ ತುರಾಯಿಗಳ ಆರ್ಭಟ

ದಾಮಿನಿ.ಎಂ.ಜಿ.ಆರ್

ಇಂದು ನಿನ್ನ ಜನ್ಮದಿನ

ಆದರೆ
ಸಮಾನತೆ, ಸ್ವಾತಂತ್ರ್ಯಕ್ಕೆ ಹೋರಾಡಿದ
ನಿನ್ನ ಸತ್ವ ಇನ್ನೂ ನಮಗೆ ಬಂದಿಲ್ಲ
ಆ ದಣಿವರಿಯದ ರಾತ್ರಿಗಳ
ನಿನ್ನ ಓದು ನಮಗೆ ಅರ್ಥವೇ ಆಗಿಲ್ಲ
ನಿನ್ನ ಆಶಯವನ್ನು ಗಾಳಿಗೆ ಬಿಟ್ಟು
ಆಚರಿಸುತ್ತೇವೆ ಜನುಮದಿನ ಅದ್ದೂರಿಯಿಂದ !!

ಅವರು ನೀಡುವ ಎಂಜಲಿಗೆ
ಕೈಚಾಚುವುದು ಇನ್ನೂ ಬಿಟ್ಟಿಲ್ಲ
ನಿನ್ನ ಜ್ಞಾನದಾಹದ ಪರಿಶ್ರಮ
ನಮಗೆ ಏಕೆ ವರವಾಗಿಲ್ಲ…??
ನಿನ್ನ ತತ್ವ ಆದರ್ಶಗಳನ್ನು ಬೀದಿಯಲ್ಲಿ ಬಿಟ್ಟು
ಆಚರಿಸುತ್ತೇವೆ ಜನುಮದಿನ ಅದ್ದೂರಿಯಿಂದ !!

ದಿನೇ ದಿನೇ ಕನಸಿನ ಗುರಿಯು
ಮರೀಚಿಕೆಯಾಗುತ್ತಿದ್ದರೂ
ನಮ್ಮ ಬದುಕಿನ ಹೋರಾಟಕ್ಕೆ
ನೀನೊಬ್ಬನೇ ಭರವಸೆಯ ಬೆಳಕು
ಶಿಕ್ಷಣ ಸಂಘಟನೆ ಹೋರಾಟ ಮರೆತು
ಆಚರಿಸುತ್ತೇವೆ ಜನುಮದಿನ ಅದ್ದೂರಿಯಿಂದ !!

ಇಂದು ಮುಗಿಯುತ್ತದೆ
ನಿನ್ನ ಭಾವಚಿತ್ರಗಳನ್ನು ಬೆನ್ನಿಗೆರಿಸಿದು
ಅದರೆ ಮನಸ್ಸು ಮುಟ್ಟುವುದಿಲ್ಲ ಬಿಡು…..
ಆಚರಿಸುತ್ತೇವೆ ಜನುಮದಿನ ಅದ್ದೂರಿಯಿಂದ !!

ನಾಳೆ…
ಮತ್ತೇ ಅದೇ ಹಳೆಯ ದಾರಿ
ಒಂದು ದಿನದ ಸಂತೆಯಂತೆ…


Leave a Reply

Back To Top