ಕಾವ್ಯಸಂಗಾತಿ
ಗಜಲ್
ಬಸವರಾಜ ಬೀಳಗಿ
ಪಲಿಸದ ಆಸೆಗಳು ಕೊರಳಿಗೆ ಜೋತುಬಿದ್ದಿವೆ
ಮನದ ಸಂಕಟಗಳು ಬಾಹುಗಳಿಗೆ ಜೋತುಬಿದ್ದಿವೆ
ಅಥ೯ವಿರದ ಹಾಡುಗಳು ಅರಚಾಡುತ್ತಿವೆ
ಮೆಲುದನಿಯ ಭಾವನೆಗಳು ಗೊಡೆಗಳಿಗೆ ಜೋತುಬಿದ್ದಿವೆ
ಕಳೆದುಕೊಂಡ ನಂಬಿಕೆಗಳು ಗೀಳಿಡುತ್ತಿವೆ
ಸಾರಿ ಹೆಳಿದ ವಾಗ್ದಾನಗಳು ಮೊಳೆಗಳಿಗೆ ಜೋತುಬಿದ್ದಿವೆ
ಕೇಳುವ ಕಥೆಗಳೆಲ್ಲವೂ ಕಣ್ಣೀರ ಹರಿಸುತ್ತಿವೆ
ಬಿಕ್ಕಳಿಸುವ ಅಂತ್ಯಗಳು ಗೊರಿಯ ಮೂಲೆಗಳಿಗೆ ಜೋತುಬಿದ್ದಿವೆ
ಪೊರೆಯುವ ಕಿರಣಗಳು ಮೊಡದಲಿ ಮರೆಯಾಗುತ್ತಿವೆ
ಹೃದಯದ ಮಾತುಗಳು ಗಾಳಿಗೋಪುರಕೆ ಜೋತುಬಿದ್ದಿವೆ