ಕರ್ನಾಟಕ ರಾಜ್ಯೋತ್ಸವ ವಿಶೇಷ

ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವುದು ಹೇಗೆ ?

ಸಂಗಾತಿ ಕೇಳಿದ ಪ್ರಶ್ನೆಗಳಿಗೆ ಅಭಿಪ್ರಾಯ ಮಂಡಿಸಿದ್ದಾರೆ ಶಿಕ್ಷಕಿ ಮಮತಾ

ಡಾ. ಮಮತ, ಕಾವ್ಯ ಬುದ್ಧ

ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವುದು ಹೇಗೆ ?

ಕನ್ನಡ ಶಾಲೆಗಳ ಅಳಿವು ಉಳಿವು ನಮ್ಮ ಮುಷ್ಟಿಯಲ್ಲಿದೆ

ಕನ್ನಡಕ್ಕೆ ಬೆಲೆ ಸಿಗುತ್ತಿಲ್ಲ.  ಇಂಗ್ಲಿಷ್ ವ್ಯಾಮೋಹ ದಿಂದಾಗಿ ಕನ್ನಡ ಶಾಲೆಗಳು ಮುಚ್ಚಿಲ್ಪಡುತ್ತಿವೆ. ಕನ್ನಡ ಶಾಲೆಗಳ ಅಳಿವು ಉಳಿವು ನಮ್ಮ ಮುಷ್ಟಿಯಲ್ಲಿದೆ.

ಈ ನಿಟ್ಟಿನಲ್ಲಿ ಸರ್ಕಾರ ಕನ್ನಡವನ್ನು ಕನ್ನಡ ಶಾಲೆಯನ್ನು ಬಲಗೊಳಿಸುವಲ್ಲಿ ಕೆಳಗಿನ ಕಾರ್ಯಕ್ರಮಗಳನ್ನು ರೂಪಿಸುವುದು ಅತ್ಯಗತ್ಯ.

ಮೌಲ್ಯಯುತ ಶಿಕ್ಷಣ ಗುಣಮಟ್ಟದ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣದ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವುದು.

ಶೌಚಾಲಯಗಳ ನಿರ್ಮಾಣದೊಂದಿಗೆ ಮೂಲಭೂತ ಸೌಕರ್ಯ ಹೆಚ್ಚಿಸಬೇಕು.

ಆಧುನಿಕ ತಂತ್ರಜ್ಞಾನ ಅಳವಡಿಕೆ ಜೊತೆಗೆ , ಮೌಲ್ಯ ಶಿಕ್ಷಣವನ್ನು ಓದಗಿಸುವುದು.  

 ಸರ್ಕಾರಿ ಶಾಲೆಯಲ್ಲಿ ಓದಿದಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಸರ್ಕಾರ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದು.

ಕನ್ನಡ ಕಡ್ಡಾಯ ಕಲಿಕೆ ಹಾಗೂ   ಕನ್ನಡದಲ್ಲೇ ವ್ಯವಹಾರ ಮಾಡಬೇಕು. ಎಲ್ಲಾ ರೀತಿಯ ದೈಹಿಕ ಶಿಕ್ಷಣ ಚಟುವಟಿಕೆಗಳಿರಬೇಕು. ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ತಾಂತ್ರಿಕ ಮತ್ತು ಉತ್ತಮ ಪರಿಸರ ನಿರ್ಮಾಣ ಮೂಲ ಸೌಕರ್ಯಗಳನ್ನು ಒದಗಿಸುವುದು.

ಉಚಿತ ಊಟ , ಸಮವಸ್ತ್ರ ರೊಂದಿಗೆ ವಿದ್ಯಾರ್ಥಿವೇತನ ಹಾಗೂ ಮಾಸಿಕ ವೇತನವನ್ನು ನೀಡುವುದು.

ಈ ಮೇಲಿನ ಎಲ್ಲಾ ಕ್ರಮಗಳಿಂದ ಕನ್ನಡ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಉಳಿವು ಸಾಧ್ಯ. 

ಕನ್ನಡ ಉಳಿಸಲು ಸರ್ಕಾಮತ್ತು ಸಾಹಿತ್ಯ ಪರಿಷತ್ತು ಏನು ಮಾಡಬೇಕು?

ಪ್ರಾದೇಶಿಕ ಭಾಷೆಯನ್ನು ಶಿಕ್ಷಣದಲ್ಲಿ ಕಡ್ಡಾಯಗೊಳಿಸಬೇಕು

ಕನ್ನಡ ಉಳಿಸಲು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಾರ್ಯನಿರ್ವಹಿಸಬೇಕು.  ಕನ್ನಡ ನಾಡು ನುಡಿಯ ಸಂರಕ್ಷಣೆಯುತ್ತ ಗಮನಹರಿಸಿ ಸಂರಕ್ಷಿಸಬೇಕು.

ಕನ್ನಡ ಭಾಷೆಗಾಗಿ ಶ್ರಮಿಸಲು.

ಕನ್ನಡ ಅಭಿಮಾನಿಗಳ ಲೇಖನಿ ಬರಹ ಕಥೆ ಕಾದಂಬರಿಗಳನ್ನು ಕನ್ನಡ ಪುಸ್ತಕಗಳಲ್ಲಿ ಪ್ರಕಟಿಸಬೇಕು.

ಕನ್ನಡ ನಾಡು ನುಡಿ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು, ಕರ್ನಾಟಕ ರಾಜ್ಯದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುವುದು.

ಕನ್ನಡ ಭಾಷೆಯ ಸಾಹಿತ್ಯ ಕಲೆ ಜನಪದ ಸಂಸ್ಕೃತಿಗಳು ಸಂರಕ್ಷಣೆಗೆ ಹೆಚ್ಚಿನ ಉತ್ತೇಜನ ನೀಡುವುದು.

ಕನ್ನಡ ಭಾಷೆ ಸಾಹಿತ್ಯ ಕಲೆ ಜನಪದ ಸಂಸ್ಕೃತಿಗಳ ಸಂರಕ್ಷಣೆಗೆ ಹೆಚ್ಚಿನ ಉತ್ತೇಜನ ನೀಡುವುದು

ಕನ್ನಡ ಪರ ಸಂಸ್ಥೆಗಳನ್ನು ಸೃಷ್ಟಿಸುವುದು.

ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕಗಳನ್ನು ಒದಗಿಸುವುದು. ಕನ್ನಡ ಸಮ್ಮೇಳನಗಳು ಗೋಷ್ಠಿ, ಸ್ಪರ್ಧೆ ಉಪನ್ಯಾಸ,  ವಸಂತ ಸಾಹಿತ್ಯೋತ್ಸವ,  ಸಾಹಿತ್ಯ ರಚನಾ ತರಬೇತಿ ಶಿಬಿರಗಳನ್ನು ಸ್ಥಾಪಿಸುವುದು.

ಕನ್ನಡ ಸಾಹಿತ್ಯದಲ್ಲಿ ಸಾಧನೆಗೈದ ವರಿಗೆ ಪ್ರತಿಭಾ ಪುರಸ್ಕಾರ ರಾಜ್ಯೋತ್ಸವ ಮುಂತಾದ ಪುರಸ್ಕಾರಗಳನ್ನು ನೀಡಿ ಗೌರವಿಸುವುದು.

ಜನಪದ ಕಲಾವಿದರನ್ನು ಹಾಗೂ ಗಣ್ಯ ಸಾಹಿತ್ಯಗಳನ್ನು ಪುರಸ್ಕರಿಸುವುದರೊಂದಿಗೆ ಪ್ರೋತ್ಸಾಹಿಸಿ ಅವರಿಗೆ ಸೂಕ್ತ ಮಾಸಿಕ ವೇತನವನ್ನು ನೀಡುವುದು.

ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಆಡಳಿತ ಭಾಷೆಯನ್ನಾಗಿ ಕಡ್ಡಾಯಗೊಳಿಸುವುದು. ಸಾರ್ವಜನಿಕ ವಲಯಗಳಲ್ಲಿ ಪಾಲಕಗಳನ್ನು ಕನ್ನಡದಲ್ಲಿ ಇರಿಸಬೇಕೆಂಬುದನ್ನು ಕಡ್ಡಾಯಗೊಳಿಸಬೇಕೆಂಬ ಪ್ರಕಟಣೆಗಳನ್ನು ಹೊರಡಿಸುವುದು.

ಪ್ರಾದೇಶಿಕ ಭಾಷೆಯನ್ನು ಶಿಕ್ಷಣದಲ್ಲಿ ಕಡ್ಡಾಯ ಗೊಳಿಸಬೇಕು.  ಹಾಗೂ  ಆಡಳಿತ ಭಾಷೆಯಾದ ಕನ್ನಡದಲ್ಲಿ ವ್ಯವಹಾರ ಮಾಡುವುದು.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಓದು ಮತ್ತು ಸರ್ಕಾರಿ ಕೆಲಸದಲ್ಲಿ ರಿಯಾಯಿತಿ ಒದಗಿಸುವುದು ಮತ್ತು ಹಣಕಾಸಿನ ನೆರವನ್ನು ಒದಗಿಸುವುದು.

ಪ್ರಸ್ತುತ ಕನ್ನಡ ಭಾಷೆ ಬಗ್ಗೆ ಅಸಡ್ಡೆ ಹೆಚ್ಚಾಗಿದ್ದು,  ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ  ನಾವೆಲ್ಲಾ ಕೈ ಜೋಡಿಸಬೇಕು.

ಡಾ. ಮಮತ,

 ಕಾವ್ಯ ಬುದ್ಧ

Leave a Reply

Back To Top