ಅನುವಾದ ಸಂಗಾತಿ
ನಾನು ಮರಣ ಹೊಂದಿದ್ದರೇ…!!?
ಮಲಯಾಳಂ ಮೂಲ:ಸಲೀಂಚೇನಂ.
ಕನ್ನಡಕ್ಕೆ:ಐಗೂರು ಮೋಹನ್ ದಾಸ್, ಜಿ.
ನನ್ನನ್ನು ಬೆಂಕಿಯಲ್ಲಿ ಸುಟ್ಟು
ಅಂತ್ಯಕ್ರಿಯೆ ಮಾಡಬಾರದು
ನದಿಯಲ್ಲಿ ಬಿಡಬೇಕು…!
ಕಾರಣ…,
ಹಲವು ಜೀವಿಗಳ ‘ಬದುಕು’
ನನ್ನ ಶರೀರ….!!!
ನದಿಯಲ್ಲಿ ಬಾಕಿ ಉಳಿಯುವ
ಮೃತ ದೇಹದ ಎಲ್ಲಾ ತುಂಡುಗಳನ್ನು
ಭೂಮಿಯ ಯಾವುದೇ ಭಾಗದಲ್ಲಿ
ಕಟ್ಟಿ ಇಡಬಾರದು..!
ಕಾರಣ…,
ನಿಮ್ಮ ಚರಿತ್ರೆ ಸಂಕಲ್ಪವಲ್ಲ
ನನ್ನ ಅಸ್ಥಿಪಂಜರ…!!!
ಅದು ಮೀನುಗಳು ಮೊಟ್ಟೆ
ಹಾಕಿ ಮರಿ ಮಾಡಲು
ಇರುವ ಪುಟ್ಟ ಮನೆಗಳು…!!!?
ಮಲಯಾಳಂ ಮೂಲ:
ಸಲೀಂಚೇನಂ.
ಕನ್ನಡ ಅನುವಾದ:
ಐಗೂರು ಮೋಹನ್ ದಾಸ್, ಜಿ.