ಜಯಶ್ರೀ ಭ ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಜಯಶ್ರೀ ಭ ಭಂಡಾರಿ

ಗಜಲ್

.

ಮೇಲಿಂದ ರಭಸದಿ ಧುಮ್ಮಿಕ್ಕುತ ಕರೆಯುತಿದೆ ಗೆಳೆಯಾ
ಅಲ್ಲಿಂದ ಉಬ್ಬಸದಿ ಹೊಮ್ಮಿ ಇಳಿಯುತ ಕರೆಯುತಿದೆ ಗೆಳೆಯಾ.

ಸಂದಕದಿ ಸಂತಸದ ಜಲರಾಶಿಯ ಚಿಮ್ಮುವುದ ನೋಡಬಾರದೇ ಒಮ್ಮೆ
ಕಂದಕದಿ  ಬಿಳಿಯ ಸೌಂದರ್ಯ ಅಲೆದು ಮೊರೆಯುತಿದೆ ಗೆಳೆಯಾ.

ಕಾಡಿನ ಪರಿಸರ ಚಂದದಿ ಜೊನ್ನಮಳೆ ಸೂರೆಗೊಂಡಿಹುದು.
ನಾಡಿನ ಸೊಬಗು ಆನಂದದಿ ಮರಳಿ ಎರೆಯುತಿದೆ ಗೆಳೆಯಾ.

ಮನದನ್ನೆಯ ಹೃದಯ ಕಮಲ ಅರಳಿ ಹೂಬಾನವಾಗಿದೆ.
ಕನಸಕನ್ನೆಯ ಆಶೆಗಳು ಅವಸರಿಸುತ ಮೆರೆಯುತಿದೆ ಗೆಳೆಯಾ.

ಲವಲವಿಕೆ ಚೆಲ್ಲಾಡಿ ಧರಣಿಯ ತಣಿಸಿ  ಸಾಗುತಿದೆ ಮಲೆಸಾಲು
ಸುಲಲಿತ ತಂಪು ಎರಚಿ ಜಯಳ ಕುಣಿಸಿ ಬೆರೆಯುತಿದೆ ಗೆಳೆಯಾ


Leave a Reply

Back To Top