ಕಾವ್ಯ ಸಂಗಾತಿ
ಹಾಯ್ಕುಗಳು
ಹೇಮಗಂಗಾ
- ಒಲವು ಎಂದೂ
ಮುಗಿಯದ ಕುಗ್ಗದ
ಅಕ್ಷಯಪಾತ್ರೆ - ಮುಂದೆ ಸಾಗಲಿ
ಪ್ರೀತಿಯ ಹಾಯಿದೋಣಿ
ತಡೆ ಇಲ್ಲದೇ - ದುರಂತ ಅಂತ್ಯ
ಸುಂದರ ಆರಂಭಕ್ಕೂ
ಇದೆ , ವಾಸ್ತವ - ಮನದ ಹಾದಿ
ಖಾಲಿಯಲ್ಲ , ನೆನಪ
ಮೆರವಣಿಗೆ - ಕಾಮ ಕಾವಿಯ
ಧರಿಸಿದವರನ್ನೂ
ಬಿಡದೀಗೀಗ - ಅಂತರಂಗದಿ
ಅರಿವಿನ ಬೆಳಕು
ಆರಬಾರದು - ಕಲ್ಲಾದವನ
ಹೃದಯದಿ ಪ್ರೀತಿ ಹೂ
ಅರಳುವುದೇ - ಮೊಗೆಮೊಗೆದು
ಕುಡಿದರೂ ಸಾಲದು
ಪ್ರೀತಿಕ್ಷೀರವ