ವಿಜಯಶ್ರೀ ಹಾಲಾಡಿ ಕವಿತೆ-ಕ್ಷಮಿಸಿಬಿಡಿ

ಕಾವ್ಯಸಂಗಾತಿ

ಕ್ಷಮಿಸಿಬಿಡಿ

ವಿಜಯಶ್ರೀ ಹಾಲಾಡಿ

ನನ್ನನ್ನು ಕವಿ ಎಂದು
ಯಾರೂ ಒಪ್ಪಿಕೊಳ್ಳಬೇಕಿಲ್ಲ
ನಾನೇ ಕರೆದುಕೊಳ್ಳುತ್ತೇನೆ

ಹೆಣ್ಣಾದರೂ ಪರವಾಗಿಲ್ಲ
ಚಂದ ಬರೆಯುತ್ತೀ
ಎಂದು ಅವಮಾನಿಸಬೇಕಿಲ್ಲ
ಬೇಕಾದರೆ ನನ್ನ ಮುಖಕ್ಕೆ
ನಾನೇ ಉಗಿದುಕೊಳ್ಳುತ್ತೇನೆ

ಹಕ್ಕುಗಳಿಗಾಗಿ ದನಿ
ಎತ್ತಿದರೆ ಕೊಲ್ಲುತ್ತೇವೆ
ಎಂದು ಬೆದರಿಸಬೇಕಿಲ್ಲ
ಮನಸ್ಸಾದ ದಿನ
ನಾನೇ ಸಾಯುತ್ತೇನೆ

ಅಹಂಕಾರದ ಮಾತು
ಅನಿಸಿದರೆ ಕ್ಷಮಿಸಿಬಿಡಿ
ದಯಮಾಡಿ ನೀವೇ
ನಾನಾಗಿ ನೋಡಿಕೊಳ್ಳಿ
ಎಲ್ಲ ಹೊಳೆಯುತ್ತದೆ !



*

One thought on “ವಿಜಯಶ್ರೀ ಹಾಲಾಡಿ ಕವಿತೆ-ಕ್ಷಮಿಸಿಬಿಡಿ

  1. ಅಮ್ಮ ಇದು ತಾಯಿ ಮಗನಿಗೆ ( ಸಮಾಜ ) ಹೇಳಿದ್ದೊ

    ಅಕ್ಕ , ಗುರು ಆಗಿ ಹೇಳಿದ್ದೊ…
    ಅಂತಿಂತು ನಿಮ್ಮ ಮಾತು ಕನ್ನಡಿಯಾಗಿದೆ….

Leave a Reply

Back To Top