ಕಾವ್ಯ ಸಂಗಾತಿ
ಎ. ಹೇಮಗಂಗಾ
ಹಾಯ್ಕುಗಳು
- ಮಾಪಕವಿಲ್ಲ
ಒಲವ ಅಳೆಯಲು
ಈ ಜಗದಲ್ಲಿ - ಮೌನಿಯಾದರೆ
ನೀ ಜಡವಾದ ಕಲ್ಲು
ಸ್ಪಂದನವಿಲ್ಲ - ನಿನ್ನಗಲಿಕೆ
ಯುಗವಾಗಿಸುತ್ತಿದೆ
ಕ್ಷಣಗಳನ್ನು - ಮಾತುಗಳೇಕೆ
ಪ್ರೀತಿ ಸಂವಹನಕೆ
ಕಂಗಳೇ ಸಾಕು - ಅಡ್ಡಿಯೇನಿಲ್ಲ
ನೀ ನನ್ನ ಮರೆಯಲು
ಮರೆತುಬಿಡು - ಛಿದ್ರಗೊಂಡಿವೆ
ಕನಸುಗಳು ಮತ್ತೆ
ಕಟ್ಟಲಾಗದು - ಮನದ ಮನೆ
ಬಾಗಿಲ ತಟ್ಟಿದವ
ನೀನು ಒಬ್ಬನೇ - ಕನಸುಗಳ
ರಂಗು ಕಂಬನಿಯಲಿ
ಕರಗಿತಲ್ಲ - ರೆಕ್ಕೆ ಮುರಿದ
ಹಕ್ಕಿ ನಾನು ಪ್ರೀತಿಯ
ಬಲವಿಲ್ಲದೇ - ಬದುಕಿನಲ್ಲಿ
ನೀನಿರದಿದ್ದರೇನು
ನೆನಪೇ ಸಾಕು - ಮುನಿಸು ತೋರಿ
ದೂರ ಸರಿದರೂ ನೀ
ಆತ್ಮಸಖನೇ ! - ಆಗಬೇಕಿದೆ
ಶಿಲ್ಪಿ ನಮ್ಮ ಬಾಳಿಗೆ
ನಾವೇ ಎಂದೆಂದೂ