ದೀಪಿಕಾ ಚಾಟೆ-ಕಾಮವೆಂಬ ಮೋಹ

ಕಾವ್ಯ ಸಂಗಾತಿ

ಕಾಮವೆಂಬ ಮೋಹ

ದೀಪಿಕಾ ಚಾಟೆ

ಕಾಮವೆಂಬ ಮೋಹವ
ಬದಿಗಿಟ್ಟು ಕಾವಿಧರಿಸುವ
ಸನ್ಯಾಸಿಗಳಿಗೆ ಮತ್ತೆ
ಕಾಮದ ಚಪಲವೇಕೆ?

ಎಳೆಯ ಕಂದಮ್ಮಗಳ
ವಿಕೃತಬಯಕೆಯೇಕೆ
ಗಂಟೆಯ ನಾದವಿರುವೆಡೆ
ಸೊಂಟದಬಳಕೆ ಬೇಕೇ?

ಉದ್ದಾನುದ್ದದ ಉಪದೇಶಗಳು
ಕೃತ್ರಿಮ ನಡೆನುಡಿಗಳು
ಜಗದ ಅಳಲು ಅಳಿಸುವವೇ
ಜನರ ಮುಗ್ಧತೆ ಬಲಿಯಾಗವೇ

ಭಾವ ಬಂಧದಿ ಬಂಧಿಯಾಗಿ
ಮನದ ಹಿಡಿತಕ್ಕೆ ಒಳಗಾಗಿ
ಅರಿಷಡ್ವೈರ್ಯಗಳ ದಾಸನಾಗಿ
ಇರುವವಂಗೆ ಗುರುಪಟ್ಟವೇಕೆ?

ಭವ್ಯ ಸಮಾಜದ ಕನ್ನಡಿ
ಚೂರುಚೂರಾಗಿ
ಮನವು ಮೈಲಿಗೆಯಾಗಿ
ಜೈಲಿನ ಸಲಾಕೆಯಲಿ ಬಂಧಿ ತಾನಾಗಿ!

ಮಠಮಾನ್ಯಗಳು
ಸಮಾದೋದ್ಧಾರಕೆ ಎರವಾಗಿ
ಸ್ವಾರ್ಥ, ಲೋಭಕೆ ಬಲಿಯಾಗಿ
ಅಸಹ್ಯದ ಕೂಪದಲಿ ತಾನಾಗಿ

ಭಂಡ ಮನಸ್ಸು
ಎದಕ್ಕೂ ಹೆದರದು
ತಪ್ಪಿದ ಹೆಜ್ಜೆಗೆ ಕನ್ನಡಿ ಬೇಕೆ?
ಕರುನಾಡ ಬೆಳಕಿಗೆ ಕತ್ತಲೆ ಆವರಿಸದಂತೆ

ಮಾಯದ ಮುಸುಕು
ತೆರೆ ಸರಿದಾಗ ಪ್ರಜ್ವಲತೆ
ಅರಿವೆಂಬ ಬೆಳಕ ದೀಪ
ಪಸರಿಸೆ ಎದೆಯ ಗೂಡಲಿ ಶಾಂತಿ

ಕವಿಯ ಮನದಿ ವಿಷಾದಯೋಗ
ಕಂಡು ಮಠಾಧೀಶನ ಅಷ್ಟಾಂಗ ಭೋಗ
ಮನಮಲೀನ ಹೆಸರು ಕೀರ್ತಿ ಭಂಗ
ಆಶ್ರಮದಲಿ ಇಂಥ ಶ್ರಮ ಬೇಕೇ?


4 thoughts on “ದೀಪಿಕಾ ಚಾಟೆ-ಕಾಮವೆಂಬ ಮೋಹ

Leave a Reply

Back To Top