ಕಾವ್ಯ ಸಂಗಾತಿ
ಸಮಾನತೆ ದೀಪ
ಉತ್ತಮ ಎ ದೊಡ್ಮನಿ
ದೀಪ ಹಚ್ಚಬೇಕಾಗಿದೆ
ಮನೆ ಎದುರಲ್ಲ
ಮನದೊಳಗೆ
ಜಾತಿ-ಧರ್ಮದ ಎಲ್ಲೆ ಮೀರಿ
ಮನದ ಮನಸು ತೆರೆದು
ಸಮಾನತೆಯ ದೀಪ
ಮನೆಯ ಕತ್ತಲೆ ಹೋಗಿಸಲಲ್ಲ
ಮನದೊಳಗಿನ ಅಂಧಕಾರವನ್ನು
ಕಿತ್ತುಹಾಕಲು ಹಚ್ಚಬೇಕಾಗಿದೆ
ಗಂಡು-ಹೆಣ್ಣೆಂಬ ಭೇದ ದಾಟಿ
ಸಮಾನಾಳೆಂಬ ಪ್ರೀತಿಯ
ದೀಪ ಹಚ್ಚ ಬೇಕಾಗಿದೆ
ಮೌಢ್ಯವನ್ನು ಕಳಚಿ,
ವಿಜ್ಞಾನದ ಬೀಜ ಬಿತ್ತಿ
ಬೆಳಸುವ ದೀಪ
ಅಜ್ಞಾನವನ್ನು ಅಳಸಿ
ಅಕ್ಷರ ಎಂಬ ಜ್ಞಾನದೀಪ
ಮನದಲ್ಲಿ ಬಿತ್ತಬೇಕಾಗಿದೆ
ಎಲ್ಲರ ಮನದ ಮೂಲೆಯಲ್ಲಿ
ಒಂದಾಗಿ ಸಾಗುವ ದೀಪ
ಹಚ್ಚಬೇಕಾಗಿದೆ, ಅತಿ ಜರೂರಿ
ಧನ್ಯವಾದಗಳು ಸರ್.
BEAUTIFUL SIR
ನಿಮ್ಮ ಕವಿತೆಗಳು ಅದ್ಭುತವಾಗಿವೆ ಸರ್….
ತುಂಬಾ ಚೆನ್ನಾಗಿ ಮೂಡಿಬಂದಿದೆ ಕವಿತೆ…