ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಎ. ಹೇಮಗಂಗಾ

ಹಾಯ್ಕುಗಳು

  1. ರವಿ ಉದಿಸಿ
    ಬೆಳಕಿನ ದುಕೂಲ
    ಉಟ್ಟಳು ಬುವಿ
  2. ಹಕ್ಕಿ ಹಾರಿದ್ದು
    ನಿರಭ್ರ ಆಗಸಕೆ
    ರುಜು ಇದ್ದಂತೆ
  3. ಮನದ ಮೌನ
    ವೀಣೆಯು ಮಿಡಿಯಿತು
    ಪ್ರೀತಿ ಸ್ಪರ್ಶಕೆ
  4. ನೀ ದೂರಾಗಿಹ
    ಕ್ಷಣದಿಂದ ಚಿಂತೆಯೇ
    ಚಿತೆಯಾಗಿದೆ
  5. ನಿನ್ನ ನೆನೆದ
    ಕ್ಷಣ ಮನ ದುಃಖದಿ
    ನೆನೆಯುವುದು
  6. ಮಂಜುಗಣ್ಣಿಗೆ
    ನೀ ಬರುವ ಹಾದಿಯೇ
    ಕಾಣದಾಗಿದೆ
  7. ಪ್ರೇಮ ವೈಫಲ್ಯ
    ಸೂತಕ ಮನದಲ್ಲಿ
    ಅಶ್ರುತರ್ಪಣ
  8. ಸಮಾನತೆಗೆ
    ಹೋರಾಡಿದವಳಿಂದು
    ಹೆಣವಾದಳು

9, ಮಾತಿಗಿಂತಲೂ
ಮೌನವೇ ಸರಿ, ವಾದ
ಅಂತ್ಯಗೊಳ್ಳಲು

10 ಹಸಿರು ಸೀರೆ
ಉಟ್ಟ ಧಾರಿಣಿ ಈಗ
ತುಂಬು ಗರ್ಭಿಣಿ

11 ದೌರ್ಬಲ್ಯಗಳು
ಇದ್ದರೂ ಪ್ರೀತಿಸುವೆ
ನಿನ್ನನ್ನು ಮಾತ್ರ

12 ಇರಬಾರದು
ಬದುಕಿದ್ದೂ ಸತ್ತಂತೆ
ಜನ್ಮ ವ್ಯರ್ಥವು


                          ಎ. ಹೇಮಗಂಗಾ

Leave a Reply

Back To Top