ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ವಿಶಾಲಾ ಆರಾಧ್ಯ

ನಾ & ನೀ ಕವಿತೆ

ನಿದುರೆಯೂರಿನ ಕದ ತೆರೆಯಬೇಡ
ಅಲ್ಲಿ ಕನಸುಗಳದೇ ಹಾವಳಿ
ಹೃದಯ ರಂಗದ ಬಳಿಗೆ ಬಂದು ನೋಡಾ
ಇಲ್ಲಿ ಭಾವಗಳದೇ ರಂಗಿನೋಕುಳಿ

ಕನಸಿನರಮನೆಗ್ಹೆಜ್ಜೆ ಸಾಗಲಿ
ಹೃದಯದಾಸನ ಜೋಕಾಲಿ
ಕಣ್ಣಿನೊಲವಿನ ಸುರೆಯು ಸೂಸಿದೆ
ಚವಿ ಬಯಸಿದಧರಂಗಳು ಸೇರಿವೆ

ಸೋಕಿದ ಬೆರಳುಗಳು ಸ್ವರಗಳ ನುಡಿಸಿ
ಮನದಲಿ ಪದನಿಸ ತೆರೆತೆರೆಗಳು
ಹಿಡಿದ ತೋಳಿನ ಬಿಗಿತ ಬಿಗಿಯಾಗಿ
ತನುವಲಿ ಸರಿಗಮ ಅಲೆಅಲೆಗಳು

ಕಾಗದದ ತುಂಬೆಲ್ಲಾ ನೀ ಬರೆದ ಅಕ್ಕರ
ನಕ್ಷತ್ರಗಳ ಶ್ರೇಯಾಂಕದ ಎದುರಾಳಿಗಳು
ಅದರಲಡಗಿದ ಭಾವಪುಂಜಗಳೋ
ಇರುಳ ಪ್ರೇಮಚಂದ್ರಮನ ಪ್ರತಿಬಿಂಬಗಳು


_ವಿಶಾಲಾ ಆರಾಧ್ಯ

One thought on “

  1. Wow beautiful lines, expressions of all the feelings that are in the way of each others part of narration, when they are just apart.

Leave a Reply

Back To Top