ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಮೌನ

ಕಾಡಜ್ಜಿ ಮಂಜುನಾಥ

r

ಮೌನದ ಬಾಚಿ
ಮಾತಿನ ಎದೆಯನು;
ಚೂರಾಗಿಸಿದೆ !

ನಿಶ್ಯಬ್ದದಿಂದ
ಅಹಂಕಾರ ಮದವ;
ಸುಟ್ಟು ಹಾಕಿದೆ!

ಅರ್ಭಟದಿಂದ
ಮೆರೆಯುವ ಜಿಹ್ವೆಯ;
ಮಣ್ಣಾಗಿಸಿದೆ!

ಕೋಪ ಕರಗಿ
ಬೆವರಾಗಿ ಹರಿದು;
ಆವಿಯಾಗಿದೆ!

ಕಿವಿ ಕಚ್ಚುವ
ಬಾನವು ರುಚಿಸದೆ;
ತಂಗಳಾಗಿದೆ !

ಬೆದರಿಸುವ
ಸಂಸ್ಕೃತಿಯು ಅಳಿದು;
ಮೂಗನಾಗಿದೆ !

ಕಾಲನ ಯಾನ
ಪಾಠವನು ಕಲಿಸಿ;
ಶುದ್ಧ ಮಾಡಿದೆ !


ಕಾಡಜ್ಜಿ ಮಂಜುನಾಥ

2 thoughts on “

Leave a Reply

Back To Top