ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಕೆ.ಶಿವು.ಲಕ್ಕಣ್ಣವರ

ಮೂರು ವರ್ಷಗಳನ್ನು ಮುಗಿಸಿದ ‘ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ’ಯ ಪಯಣವು ನೂರಾರು ವರ್ಷಗಳ ಪಯಣವಾಗಲಿಯೂ —

ಅಂದ ಹಾಗೆ ‘ಸಾರ್ಥಕ ಬದುಕಿನ ಸಂವಾದಕ್ಕೊಂದು ಸಲ್ಲಾಪ’ ಎಂಬ ಅಡಿ ಬರಹದ ‘ಸಲ್ಲಾಪ’ ಎಂಬ ವಾರಪತ್ರಿಕೆ ಇತ್ತು ಹಿಂದೆ. ಅದು‌ ಸಾಹಿತಿ ಶೂದ್ರ ಶ್ರೀನಿವಾಸರದು..!

ಶೂದ್ರ ಶ್ರೀವಾಸರು ಅದೇ ಆಗ ಪಿ.ಲಂಕೇಶ್ ರ ಜೊತೆಗೆ‌ ಒಂದಷ್ಟು ಮುನಿಸಿಕೊಂಡು ಶುರುಮಾಡಿದ ಪತ್ರಿಕೆಯಾಗಿತ್ತು, ‘ಸಾರ್ಥಕ ಬದುಕಿನ ಸಂವಾದಕ್ಕೊಂದು ಸಲ್ಲಾಪ’ವು. ಅದೇ ರೀತಿಯಲ್ಲಿ ಈಗೊಂದು ಸಲ್ಲಾಪವಲ್ಲ, ‘ಸಂಗಾತಿ’ ಎಂಬ ‘ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ’ಯೂ‌ ಇದೆ. ಅದು ಕು.ಸು.ಮಧುಸೂದನ, ರಂಗೇನಹಳ್ಳಿಯವರದು..!

ಈಗಲೂ ‘ಸಂಗಾತಿ’ ಎಂಬ ಸಾಹಿತ್ಯದ ಪಯಣದ ಸಲ್ಲಾಪೂ ಇದೆ. ಅದು ‘ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ’ ಎಂಬ ಕು.ಸು.ಮಧುಸೂದನ, ರಂಗೇನಹಳ್ಳಿಯವರದು..!

ಆ ಪಯಣದ ಬಗೆಗೆ ಒಂದೆರಡು ಮಾತು.

‘ಸಾರ್ಥಕ ಬದುಕಿಗೆ ಸಾಹಿತ್ಯ ಸಂಗಾತಿ’ ಎಂಬ ಅಡಿ ಬರಹವನ್ನು ಉಳ್ಳ ‘ಸಂಗಾತಿ’ಗೆ ಈಗ ಮೂರು ವರ್ಷಗಳ ಪ್ರಾಯವು..!

ಈ ‘ಸಾಹಿತ್ಯ ಸಂಗಾತಿ’ಗೆ ಈಗ ಮೂರು ವರ್ಷಗಳ ಪ್ರಾಯ..! ಈ ಸಾಹಿತ್ಯ ಸಂಗಾತಿಯನ್ನು ಮೊದಲು ಪ್ರಧಾನ ಸಂಪಾದಕರಾಗಿ ಕು.ಸು.ಮಧುಸೂದನ, ರಂಗೇನಹಳ್ಳಿ, ಗೌರವ ಸಂಪಾದಕರಾಗಿ ಹೊನ್ನಾಳಿ ಶಿವಕುಮಾರ, ಮತ್ತು ಕಾರ್ಯ ನಿರ್ವಾಹಕ ಸಂಪಾದಕರಾಗಿ ನಾಗರಾಜ ಹರಪನಹಳ್ಳಿ ಅವರು ಇದೇ ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದರು..!

ಸಾಹಿತ್ಯಕ್ಕೊಂದು ಈ ರೀತಿಯ ಒಂದು ಸಂಗಾತಿಯನ್ನು ತಂದು, ಬರೀ ಸಾಹಿತ್ಯದಿಂದ ಒಂದು ಚಿಕ್ಕಾಸೂ ಲಾಭವಿಲ್ಲದ ಇಲ್ಲದ ಈ ಸಮಯದಲ್ಲಿ ‘ಸಾರ್ಥಕ ಬದುಕಿಗೆ ಸಾಹಿತ್ಯ ಸಂಗಾತಿ’ ಅಡಿ ಬರಹದ ‘ಸಂಗಾತಿ’ಯನ್ನು ಹುಟ್ಟು ಹಾಕಿಕೊಂಡು ಇಲ್ಲಾಬಾರದ ಕಷ್ಟ ಕಾರ್ಪಣ್ಯಗಳ ನಡುವೆಯೇ, ನೂರೆಂಟು ಅಡೆ ತಡೆಗಳ ಮಧ್ಯಯೇ ಈ ಕು.ಸು.ಮಧುಸೂದನ್, ರಂಗೇನಹಳ್ಳಿ ಅವರು ಈ ಸಂಗಾತಿಯನ್ನು ನಡೆಸಿಕೊಂಡು ಬಂದ ಪರಿಯೇ ಒಂದು ರೋಚಕ ಮತ್ತು ಅನನ್ಯವಾದ ಪ್ರಯತ್ನದ್ದು ಆಗಿದೆ..!

ಸಂಗಾತಿಯು ಇಂದು ಮೂರು ವರ್ಷಗಳನ್ನು ಪೂರೈಸುತ್ತಿದೆಯೇನೋ ಸರಿ. ಆದರೆ ಇದರ ಹಿಂದೆ ಕು.ಸು.ಮಧುಸೂದನ, ರಂಗೇನಹಳ್ಳಿ ಅವರು ಪಟ್ಟ ಮತ್ತು ಅಲ್ಲದೇ ಪಡುತ್ತಿರುವ ಕಷ್ಟ ಕಾರ್ಪಣ್ಯ ಒಂದೆರಡುಲ್ಲ. ಆರಂಭದಲ್ಲಿ ಅವರು ಅಂದರೆ ಕು.ಸು.ಮಧುಸೂದನ, ರಂಗೇನಹಳ್ಳಿ ಅವರು ಈ ಸಾಹಿತ್ಯ ಸಂಗಾತಿಯನ್ನು ಬೆಳೆಸುವುದರಲ್ಲಿ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರು. ನಾನು ಕಂಡಂತೆ, ನಾನೇ ಕೊಟ್ಟ, ಕಷ್ಟಗಳು ಸಾಕಷ್ಟು. ಅಂದರೆ ಪ್ರಧಾನ ಸಂಪಾದಕರಾದ ಕು.ಸು.ಮಧುಸೂದನ, ರಂಗೇನಹಳ್ಳಿ ಅವರು ಆರಂಭದಲ್ಲಿ ನನ್ನಿಂದ ಈ ಸಾಹಿತ್ಯದ ವಿಷಯಗಳ ಬರಹಗಳನ್ನು ಬರೆಯಿಸಲು ನನ್ನ ಫೋನ್ ಗೆ ಕರೆನ್ಸಿ ಹಾಕಿಸಿ, ನಾನಾ ಬಗೆಯ ಸಾಹಿತ್ಯ ವಿಷಯಗಳನ್ನು ಬರೆಯಿಸಿದರು. ಹಾಗೆಯೇ ಫೋನ್ ಗೆ ಕರೆನ್ಸಿಯನ್ನು ಹಾಕಿಸಿ, ಎಲ್ಲಾ ಜ್ಞಾನಪೀಠ ಪ್ರಶಸ್ತಿ ವಿಜೇತರ ಕುರಿತು ಬರಹಗಳನ್ನು ಬರೆಯಿಸಿದರು..!

ಅಲ್ಲದೇ ನನ್ನ ಬೇಕು ಬೇಡಗಳನ್ನು ಪೂರೈಸಿಯೇ ಆರಂಭದಲ್ಲಿ ನನ್ನಿಂದ ಸಾಧ್ಯವಾದ ಸಾಹಿತ್ಯದ ಬರಹಗಳನ್ನು ಬರೆಯಿಸಿದರು ಕು.ಸು.ಮಧುಸೂದನ, ರಂಗೇನಹಳ್ಳಿ ಅವರು..!

ಹೀಗೆಯೇ ಏನೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಪಡುತ್ತಲೇ ಈ ‘ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ’ಯನ್ನು ಬೆಳೆಸಿದರು. ಇದು ಅಲ್ಲದೇ ಈಗಲೂ ನಿಂತಿಲ್ಲ ಈ ಕೇವಲ ಸಾಹಿತ್ಯಕ್ಕೇ ಮೀಸಲಾದ ಸಂಗಾತಿಯನ್ನು ಮುಂದುವರೆಸಿಕೊಂಡು ಹೋಗುವದರಲ್ಲಿಯ ತೊಂದರೆಗಳು..!

ಒಮ್ಮೊಮ್ಮೆ ಬರಹಗಾರರು ಸಕಾಲಕ್ಕೆ ಬರಹಗಳನ್ನು ಕಳೆಸುವುದಿಲ್ಲ. ಆ ಎಲ್ಲಾ ರೀತಿಯ ತೊಂದರೆ ತೊಡಕುಗಳನ್ನು ದಾಟಿಕೊಂಡು ಸಾಹಿತ್ಯದ ಪಯಣವು ಮುಂದುವರಿದೇ ಇದೆ ಈ ಕು.ಸು.ಮಧುಸೂದನ‌ ರಂಗೇನಹಳ್ಳಿ ಅವರ ಅದ್ವಿತೀಯ, ಅನನ್ಯವಾದ ಪ್ರಯತ್ನಗಳು..!

ಹೀಗೆನ್ನುತ್ತಲೇ ಈಗ ಮೂರು ವರ್ಷಗಳ ಪಯಣವನ್ನು ಮುಂದುವರಿಸಿರುವ ‘ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ’ಯ ಈ ಪಯಣವೂ ಇನ್ನೂ ನೂರಾರು ವರ್ಷಗಳನ್ನು ದಾಟಲಿಯೆನ್ನುತ್ತಲೇ‌ ಈ ಬರಹವನ್ನು ಇಲ್ಲಿಗೆ ಮುಗಿಸುತ್ತೇನೆ..!

ಕೆ.ಶಿವು.ಲಕ್ಕಣ್ಣವರ

Leave a Reply

Back To Top