ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಕಣ್ಣುಗಳ ಬಗೆಗಳು *

ಮಕ್ಕಳ ಕವಿತೆ

ಪ್ರಭುರಾಜ ಅರಣಕಲ್

ಣ್ಣುಗಳ ಬಗೆಗೆ ತಿಳಿಯುವುದಾದರೆ
ಕಣ್ಣುಗಳಲಿ ತರಹಗಳುoಟು
ಹುಟ್ಟಿದಕೂಸಿಗೆ ಕಾಜಿನ ಕಣ್ಣು –
ಮುಂದದು – ಬದಲಾಗುವುದುಂಟು

ಕೂಸು ಬೆಳೆದಂತೆ ಗಾಜಿನ ಕಣ್ಣು
ವಿವಿಧ ಬಣ್ಣಗಳ ಪಡೆಯುವುದು
ಬೆಕ್ಕಿನಕಣ್ಣು ನೀಲಿಯ ಕಣ್ಣು
ಕಂದುಗಣ್ಣುಗಳ – ಹೊಂದುವುದು

ಸಾಮಾನ್ಯವಾಗಿ ಕಡುಗಪ್ಪುಗಣ್ಣು
ಹೊಂದಿರುವ ಜನತೆ ಎಲ್ಲೆಡೆಯು
ನೀಲಿಯ ಬಣ್ಣದ ಕಣ್ಣುಗಳು ಮಾತ್ರ
ಅಪರೂಪದಿ ಕಂಗೊಳಿಸುವುವು…

ಗಾರುಗಣ್ಣುಗಳು ಮೆಳ್ಳೆಗಣ್ಣುಗಳು
‘ಒಕ್ಕಣ್ಣು’ ಹೊಂದಿದವರುಂಟು
ಇನ್ನೆಷ್ಟುಕಣ್ಣು ಬಗೆಗಳಿರುವವೋ?
ಆ ಮುಕ್ಕಣ್ಣನಿಗೇ ಗೊತ್ತು!…..


ಪ್ರಭುರಾಜ ಅರಣಕಲ್

Leave a Reply

Back To Top