ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಡಾ. ನಿರ್ಮಲ ಬಟ್ಟಲ
ಚಕೋರ
ಬೆಳದಿಂಗಳ ರಾತ್ರಿಯಲಿ
ಬೀಸುವ ತಂಗಾಳಿಯಲಿ
ಒಂಟಿ ಮರದ ಮುರಿದ ಕೊಂಬೆಯಲಿ ಕುಳಿತು
ಹಾಡುವ ನನ್ನ ಅನುರಾಗ
ಗೀತೆ ಕೇಳು ಚಂದ್ರಮ….
ಹೊಳಪಿಗೆ ಬಿಳುಪಿಗೆ
ನಿನ್ನ ಹೋರತು ಬೇರೆ ಹೋಲಿಕೆಯಿಲ್ಲ
ಕಾಯುವಿಕೆಗೆ ನಾನೇ
ಉಪಮಾನವು ನಲ್ಲ
ಸುರಿಸು ಬೆಳದಿಂಗಳ
ತಣಿದು ಮೈಮರೆವೆ……
ದೂಡದಿರು ಮತ್ತೆ
ಕತ್ತಲೆಯ ಮಡಿಲಿಗೆ
ತೇಲಿಸಿಬಿಡು ಪ್ರೇಮದಮಲಲಿ
ಪ್ರತಿ ಕ್ಷಣವೂ ಸಂತಸದಲಿ
ಬೇಕಿಲ್ಲ ಭ್ರಮೆ ವಾಸ್ತವದ ಗೊಡವೆ
ಈ ಪ್ರೇಮ ಬೈರಾಗಿಯ ನಿರೀಕ್ಷೆಗೆ….
ನಿನ್ನ ಚೆಲುವ ಕಣ್ಣ ತುಂಬಿಕೊಂಡು
ಒಲವ ಸುಧೆಯನುಂಡು
ಕಾಯುವೆನು ಎದೆ ಬಿರಿವ ನೋವ ಸಹಿಸಿಕೊಂಡು
ಬೆಳಕು ನೀನು ಭ್ರಮೆಯು ನಾನು
ಕಾಯುವೆನು ನೀನಗಾಗಿ
ಬರಿ ನಿನಗಾಗಿ…..!
================
ಡಾ. ನಿರ್ಮಲ ಬಟ್ಟಲ
ಭಾವಪೂರ್ಣ ಕಾವ್ಯ. ಅಭಿನಂದನೆಗಳು ಮೇಡಂ.
ಬೆಳಕು ನೀನು ಭ್ರಮೆಯು ನಾನು ….
ಭಾವೋದ್ವೇಗದ ಉತ್ಕಟತೆ! ಸುಂದರ ಕವನ.
ಚೆನ್ನಾಗಿದೆ
ಚೆನ್ನಾಗಿದೆ ಮೇಡಮ್.
ತಾಳ್ಮೆಯ ಓದು ಮತ್ತು ನಲ್ಮೆಯ ಪ್ರತಿಕ್ರಿಯೆಗೆ ಧನ್ಯವಾದಗಳು