ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ರುಮ್ಯಾಟಿಕ್ ಹೃದಯ

ಡಾ.ಡೋ ನಾ ವೆಂಕಟೇಶ್

ನಾನೇನೂ ಕೇಳಿರಲಿಲ್ಲ
ಬಾ
ಇಡು ನನ್ನ ಹೃದಯಕ್ಕೆ ಲಗ್ಗೆ
ಎಂದೇನೂ ಬಯಸಿರಲಿಲ್ಲ

ನೀನಾಗೇ ಬಂದೆ
ಮಹಾಕಾಳಿಯಾಗಿ ನಿಂದೆ!

ಬಂದೆಯಾ!
ಮೊದಮೊದಲು ಬೆಳಗಿನ ಝಾವದ ಅಮಲಾಗಿ ಬಂದೆ
ಹಿತವಾಗದ ನೋವಾಗಿ ನನ್ನ
ಗಂಟುಗಂಟುಗಳಲ್ಲಿ ತೊಡಗಿಸಿ ಕೊಂಡೆ
ನಿನ್ನ ಸೂಕ್ಷ್ಮಾತಿ ಸೂಕ್ಷ್ಮ ದೇಹ
ಗಂಟಲಲ್ಲಿ ಭಾರವಾಗಿ ಬಿದ್ದೆ

ಏ! ಬ್ಯಾಕ್ಟೀರಿಯ
ದಾಂಗುಳಿಯಿಟ್ಟೆ ಹೃದಯಕ್ಕೆ
ಭಾರವಾಯ್ತು ಮನಸ್ಸು
ಕೇಳದಾಯ್ತು ದೇಹ

ಏದುಸಿರು ಹೇಗಿತ್ತು ಗೊತ್ತ
ನಿನ್ನ ಹೆಸರು ಕೇಳುತ್ತ ಕೇಳುತ್ತ?

ನಿರ್ಮಿಸಿದೆ ನೀ ವಸಾಹತುಗಳ
ನನ್ನ ಹೃದಯ ದ್ವಾರಗಳಿಗೆ
ಪ್ರಾಣದ್ರವ ಗುಂಡಿಗೆಯ
ಹೃತ್ಕರ್ಣದಿಂದ ಹೃತ್ಕರ್ಷ ತಲುಪುವ ಮುನ್ನ
ತಡೆಹಿಡಿಯಲಾರಂಭಿಸಿದೆ.
ಮೈಟ್ರಲ್ ಸ್ಟಿನೋಸಿಸ್!

ಆದರೆ ಏ ಕೇಳೆ ಬ್ಯಾಕ್ಟೀರಿಯ
ನಾನೇನೂ ಹೆದರಲಿಲ್ಲ
ಪ್ರಾಣಭಿಕ್ಷೆ ಬೇಡಲಿಲ್ಲ ನಿನ್ನನ್ನ

ವಾಲ್ವಾಟಮಿ
ಕಿತ್ತು ನಿನ್ನ ವಸಾಹತುಗಳ ಮತ್ತು ಅದಕ್ಕವಚಿದ ನನ್ನ
ಕವಾಟಗಳ, ನೆಟ್ಟೆ
ಹೊಸ ಹೊಸ ವಾಲ್ವುಗಳ
(ಪೀಡೆ ಕಳೆಯಿತು ಶಸ್ತ್ರ ಕ್ರಿಯೆಯಿಂದ)

ನೋಡೇ
ನಿನ್ನ ರುದ್ರ ನರ್ತನದ ವಿಜಯೋತ್ಸವ ನಡೆಸಿದ್ದು ನಾ
ರಾಣಿ ಓ ಬ್ಯಾಕ್ಟೀರಿಯಾಣಿ!!
ಹೇಗಿದೆ ಹೊಸ ಹೊಸ
ಪ್ರಪಂಚದ ಈ ಸ್ಯಾಂಪಲ್ಲು
ಸೀಮೋಲ್ಲಂಘನ ಮಾಡುತ್ತೇನೆ
ಎಲ್ಲೆಲ್ಲೂ!

ಜಯಸಿತ್ತೇನೆ ನಿನ್ನ
ಪರಿಧಿಗಳಿರುವೆಡೆಯಲ್ಲೆಲ್ಲೂ!!


ಡಾ.ಡೋ ನಾ ವೆಂಕಟೇಶ

About The Author

14 thoughts on “”

  1. Dr K B SuryaKumar

    Rheumatic Heart and it’s infection, explained brilliantly…. ಕನ್ನಡದಲ್ಲಿ ವೈದ್ಯಕೀಯ ಪಾಠ ಸಾದ್ಯವಿಲ್ಲ ಎಂದವರಾರು ?????

  2. ಕನ್ನಡ-ಆಂಗ್ಲ ಭಾಷೆಯ ಮಿಶ್ರಣದ ಈ ಸುಂದರವಾದ ಕವಿತೆಯನ್ನು ಓದಿ ನನ್ನ ಹ್ರದಯ
    ಆನಂದಮಯವಾಯಿತು.

    1. D N Venkatesha Rao

      ನಿಮ್ಮ ಅಚ್ಚ ಕನ್ನಡದ ಪ್ರಶಂಸಾಪೂರ್ವಕ ಉತ್ತರವನ್ನು ನೋಡಿ ಮಹದಾನಂದವಾಯಿತು.
      ಧನ್ಯವಾದಗಳು,ಮಂಜು ರವರೆ

    1. D N Venkatesha Rao

      Thank you
      I tried to narrate it poetically and I doubt a non medical man could appreciate it
      The poem was written about 25 yrs back

Leave a Reply

You cannot copy content of this page

Scroll to Top