ಚಂದ್ರಶೇಖರ ಹೆಗಡೆ-ಮಧುಶಾಲೆ

ಕಾವ್ಯ ಸಂಗಾತಿ

ಮಧುಶಾಲೆ

ಚಂದ್ರಶೇಖರ ಹೆಗಡೆ

ವಿನೀತನನ್ನಾಗಿಸು ಓ ಒಲವೇ
ಪುನೀತನನ್ನಾಗಿಸು ಪ್ರೇಮಗಂಗೆಯೆ

ಧ್ಯಾನವೆಂದುಕೊಂಡಿರುವೆ ಧಾರೆಯೆರೆದ ಒಲವಿನ ಮಂಥನ
ಶಿಲಾಬಾಲಿಕೆಯ ಮುಂದೆ ಹಮ್ಮಿಕೊಂಡಿರುವ ತಪ ಚಿರಂತನ

ಸುಮ್ಕನೆ ಕಣ್ಣುಮುಚ್ಚಿಬಿಡುವೆ
ಕಾಣಲಾಗದ್ದನ್ನು ಕಂಡರಿಯಬೇಕೆಂದು
ಎಂದೊದಗುವುದೋ ಬಾಗಿರುವೆ ಮಿಂಚು ಮುಂಗಾರಿನ ಮುಂದು

ಸರದಿಯ ಸಾಲುಗಳಿಲ್ಲ ಒಬ್ಬನೇ ಕೈಯ್ಯೊಳಗಿನ ಅಲಗು
ಬೀಸುವವರ ಒಡಲಾಳ ನನಗಿಲ್ಲ ಮಾಯವಾಗುವ ಕೊರಗು

ಹಣತೆಯ ಮುಂದೇನಿದೆ ಬಾಗಿ ಸುತ್ತುವುದೊಂದೇ ಕಾಯಕ
ಚಿಂತೆಯಿಲ್ಲ ನುಂಗಿದರೂ ಪ್ರೇಮದೊಳಗೆ ಕರಗುವ ಅಮಾಯಕ

ದೀನತೆಯೇ ಸಾಕು; ಧನ್ಯ ದಕ್ಕಿತಲ್ಲ ಹೇಗಾದರೂ ಕೊನೆಗೆ
ಇನ್ನೇನು ಬೇಕು ಹೊರಡಲು ಸಂತನಾಗಿ ಪ್ರೀತಿಯರಮನೆಗೆ

ಬದುಕು ಕಲಿಸಿದ ಒಲವು ಹೃದಯದೊಳಗೆ ಕಾಲಿಟ್ಟ ಮೇಲೆ
ಖಾಲಿಯಾಗಲೇ ಇಲ್ಲ ಕೈಯ್ಯೊಳಗಿನ ತುಂಬಿದ ಮಧು ಪ್ಯಾಲೆ

ಹೊರಡಬೇಕಿನ್ನು ಹುಡುಕಿ ಹೊಸ ಭರವಸೆಯ ಮಧುಶಾಲೆ
ಯಾರ ಕೊರಳನ್ನಲಂಕರಿಸುವುದೋ ಒಲುಮೆ ಹಾಕುವ ಮಾಲೆ


Leave a Reply

Back To Top