ಕಾವ್ಯ ಸಂಗಾತಿ
ಗಜಲ್
ಜಯಶ್ರೀ.ಭ.ಭಂಡಾರಿ
ಬಾಳಿನ ಬೆಳಕಾಗಿ ಹೆಣ್ಣು ಶಿಶುವು ಹುಟ್ಟಿ ಸೊಗಸ ಹಂದರ ತಂದಿದೆ.
ನಾಳಿನ ನೆಮ್ಮದಿಗಾಗಿ ನವಿರಾದ ನೆನಪುಗಳ ಹೊಂಗನಸು ಚಂದಿದೆ.
ಮನೆಯ ಕಣ್ಮನಿ ನವರಾತ್ರಿ ಮೊದಲ ಆರಾಧನೆಯಲಿ ಜನಿಸಿದಿಯಲ್ಲವೇ
ಅರಮನೆಯ ಚಿನ್ಮಯಿ ಕುವರಿ ಹೊಳೆಯ ಹರುಷದಲಿ ಮಿಂದಿದೆ.
ಬಂಧು ಬಾಂಧವರು ಶೈಲಪುತ್ರಿಯೇ ಜನಿಸಿಹಳೆಂದು ಒಲವಿನಲಿ ವರ್ಣಿಸಿದರು.
ನಿಂದು ದೇವಿಯ ಬಾಗಿಲಲಿ ಹರಕೆಯ ಫಲವು ಹಸಿರ ಹೊನಲಾಗಿ ಸಂದಿದೆ.
ಲಕುಮಿ ಕಳೆಯ ಪಡೆದ ಚೆಲುವೆಯ ಮುದ್ದಿಸಿ ಜೋಗುಳ ಪಾಡಿದರೆಲ್ಲರು
ನವಮಿ ಇಳೆಯ ಕೆಳೆಯ ಹೆಚ್ಚಿ ಒಲುಮೆಯ ಕೂಸು ಮುದದಿ ಬಂದಿದೆ.
ತಾಯ ಮಮತೆಗಿಂದು ಗರಿಮೂಡಿ ಗೌರಿಯ ತಬ್ಬಿಹಳು ಅನುರಾಗದಿ.
ಮಾಯೆ ಅನುಗ್ರಹ ದಯೆಯ ಸಿರಿಯಲ್ಲಿ ಶ್ರೀ ಅನುಕ್ಷಣ ಅರಳುತ ಬಂದದಿ.
Nice
ತುಂಬಾ ಚೆಂದದ ಭಾವ…
ಹೆಣ್ಣು ಮಗುವಿನಂತೇ..