ಕಾವ್ಯಸಂಗಾತಿ
ಗಜಲ್
ಬಸವರಾಜ ಬೀಳಗಿ
ಇರುವೆಯೊಂದು ಆನೆಯ ಸೊಲಿಸಿದ್ದು ಸುಳ್ಳಲ್ಲ ಮರೆಯದಿರು
ಗೀರು ಕಡ್ಡಿಯೊಂದು ಜಗವ ಸುಟ್ಟದ್ದು ಸುಳ್ಳಲ್ಲ ಮರೆಯದಿರು.
ಬೇವು ಬಿತ್ತಿ ಮಾವು ಬೆಳೆದವರಾರಿಲ್ಲ ಇಲ್ಲಿ
ಇರುವೆಗಳು ಬೆಟ್ಟವನ್ನು ಬಗೆದದ್ದು ಸುಳ್ಳಲ್ಲ ಮರೆಯದಿರು.
ಹಾಡುವ ಕೋಗಿಲೆಯ ಸ್ವರಕ್ಕೆ ಕೊಂಕುನುಡಿಯುವರಿದ್ದಾರೆ ಇಲ್ಲಿ
ಮಿಂಚೊಂದು ಕರಿಮೊಡಗಳ ಕರಗಿಸಿದ್ದು ಸುಳ್ಳಲ್ಲ ಮರೆಯದಿರು
ನಿನ್ನ ಓಟವ ಸಹಿಸದೆ ಮುಳ್ಳಿನ ಹಡದಿ ಹಾಸುತ್ತಾರೆ ಇಲ್ಲಿ
ತೆವಳುತ್ತ ಚಲಿಸಿದ ಆಮೆ ಗಮ್ಯ ಸೇರಿದ್ದು ಸುಳ್ಳಲ್ಲ ಮರೆಯದಿರು.
ಕುಹಕದ ಮಾತುಗಳು “ಅವನಿಗೂ” ತಪ್ಪಿದ್ದಲ್ಲ
ಸುಬಾ ಜಡಿ ಮಳೆಯ ಹನಿಗಳೇ ನದಿಯಾದದ್ದು ಸುಳ್ಳಲ್ಲ ಮರೆಯದಿರು.
Excellent sir….. ಅರ್ಥಗರ್ಭಿತವಾಗಿದೆ
Super sir
Really super lines sir
Beautiful and motivation gajal
Beautiful and motivation gajal sir
ತುಂಬ ಚೆನ್ನಾಗಿದೆ ಸರ್