ಕಾವ್ಯಸಂಗಾತಿ
ಗಿಡ ಮರಗಳ ಮನದ ಮಾತು
ಅನ್ನಪೂರ್ಣ ಸು ಸಕ್ರೋಜಿ
ವಟವೃಕ್ಷ ಕೇಳಿತು ಕೈಯ್ಯಾಡಿಸುತ
ಶಮಿವೃಕ್ಷಕೆ ಪ್ರೀತಿಯಿಂದ ನೋವಾ
ಎನುತ ತನ್ನ ನೋವ ಮರೆತು
ಅಳುತ ಮುಖ ಮುಚ್ಚಿಕೊಂಡಿತು
ದಸರೆದಿನ ಬನ್ನಿ ಬಂಗಾರವೆಂದು
ನನ್ನ ರೆಂಬೆ ಕೊಂಬೆ ಚಿಗರುತಿರುವ
ನಾಜೂಕ ಎಲೆಗಳನು ಕಿತ್ತು ಹಾಕು
ಮಾನವರಲ್ಲ ಇವರು
ನನಗೆ ನೋವನಿತ್ತು ಆನಂದಿಸುವ
ಮನುಜರು ಹಣಕಾಗಿ ಹಬ್ಬವೆಂದು ಆಚರಿಸುವ
ಮುಗ್ಧರೊ ಮೂಢರೊ ಮೂರ್ಖರೋ
ಬಂಗಾರದ ಸನ್ಮಾನಕೆ ಹಿಗ್ಗಿದೆ ಆರಿ
ಪೂಜೆಗೊಂಡೆ ನಲಿದಾಡಿದೆ ಆದರೆ
ಕಸದಲಿ ಬಿದ್ದಾಡಿ ನರಳಿದೆ ಮರುದಿನ ಕೇಳುವವರಾರಿಲ್ಲ
ಹೌದು ಶಮಿ,ಆರಿ ನನ್ನಗತಿ ಅದೇ
ಏಳು ಜನ್ಮದ ಸಂಗಾತಿಗಾಗಿ ಬಲಿ
ನಾ, ನಾವು ನೆರಳು ಆಶ್ರಯ ಕೊಟ್ಟಿದ್ದನ್ನು ಮರೆವ ಕಟುಕರು
ನೆಲ್ಲಿಕಾಯಿ, ತುಳಸಿ, ಬಿಲ್ವ,ಎಕ್ಕಿ
ಎಲ್ಲ ಒಕ್ಕೊರಲಿನಿಂದಹೌದೆಂದವು
ಗರಿಕೆ ಮಾತ್ರ ಗಹಗಹಿಸಿ ನಕ್ಕಿತು ಮತ್ತೆ ಚಿಗುರುವೆನೆಂಬ ಭರವಸೆ
ಇರಲಿ ನನ್ನವರೆ ದೇವನಿದ್ದಾನೆ
ಎಲ್ಲಾ ಗಿಡ ಮರ ಬಳ್ಳಿಗಳೂ ಹೀಗೆ ಅಂದುಕೊಳ್ಳುತ್ತಿರಬಹುದು.!