ಕಾವ್ಯಸಂಗಾತಿ
ಜಯಶ್ರೀ.ಭ.ಭಂಡಾರಿ- ಗಜಲ್
ಒಳಗಿನ ಹುಳುಕು ತೊಡೆಯಲು ಹೊರಗೆ ದ್ವನಿಯ ಎತ್ತಬೇಕಿದೆ ಆಗಾಗ
ಬೆಳಗಿನ ಕೊಳಕು ಮಾತುಗಳ ನಿಂದನೆಗಳ ಅಡಗಿಸಿ ಕಿತ್ತಬೇಕಿದೆ ಆಗಾಗ.
ಅವರವರ ಕರ್ಮ ಮಾಡಿದ್ದುಣ್ಣೋ ಮಹರಾಯ ಬಿಟ್ಟು ಬಿಡಬೇಕಲ್ಲವೇ.
ಹೆರವರ ಮರ್ಮ ಅರಿಯದೇ ಕಾಡಿದ ಸಂಕಟ ಹೇಳುತ ಸುತ್ತಬೇಕಿದೆ ಆಗಾಗ.
ಮಾಡಿದೇನೆಂಬುದು ಮನದಲಿ ಸುಳಿದರೆ ದೇವನು ಮೆಚ್ಚಲಾರನು.
ಆಡಿಕೊಂಡು ನಕ್ಕವರ ಸಂತೆಯಲಿ ಮರೆಯದೇ ಮೆತ್ತಬೇಕಿದೆ ಆಗಾಗ.
ಆವೇಶದಲ್ಲಿ ಸಂಬಂಧ ಚಿಗುರಿಸದೆ ಒಡೆಯುವ ಯತ್ನ ಮಾಡಿದವರೇ ಎಲ್ಲ
ವೇಷವ ಧರಿಸಿ ಕಬಂಧ ಬಾಹುಗಳ ಚಾಚಿದವರ ಕತ್ತಿಗೆ ಒತ್ತಬೇಕಿದೆ ಆಗಾಗ.
ಹೊಟ್ಟೆ ಕಿಚ್ಚಿನ ಮೊಟ್ಟೆ ಪರರ ಏಳ್ಗೆಗೆಯನು ಕಂಡು ಕುಂದುವುದು ಜಯಾ
ಕೊಟ್ಟಿದ್ದು ಕೆಟ್ಟಿತೆನದೆ ಮಟ್ಟ ಹಾಕಿ ಬೆತ್ತದಿ ಚಿತ್ತವ ಮುತ್ತಬೇಕಿದೆ ಆಗಾಗ
ಭಾವ ತುಂಬಿದ ಗಜಲ್