ಶ್ರೀ ಹೊನ್ಕಲ್ ಸಾಹಿತ್ಯ ಪ್ರಶಸ್ತಿಗಾಗಿ ಕನ್ನಡ ಸೃಜನಶೀಲ ಕೃತಿಗಳ ಅಹ್ವಾನ.

ಇತರೆ

ಶ್ರೀ ಹೊನ್ಕಲ್ ಸಾಹಿತ್ಯ ಪ್ರಶಸ್ತಿಗಾಗಿ ಕನ್ನಡ ಸೃಜನಶೀಲ ಕೃತಿಗಳ ಅಹ್ವಾನ.

ಆತ್ಮೀಯರೇ,

ಪ್ರತಿ ವರ್ಷದಂತೆ ನಮ್ಮ ತಂದೆಯ ಸ್ಮರಣಾರ್ಥ ಕಳೆದ ಎಂಟು ವರ್ಷಗಳಿಂದ ನಡೆಯಿಸಿಕೊಂಡು ಬಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ  ನಮ್ಮ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಸೃಜನಶೀಲ ಸಾಹಿತ್ಯದ ಕಥೆ,ಕಾದಂಬರಿ, ಕಾವ್ಯ (ಗಜಲ್,ಹೈಕು, ತಂಕಾ,ಶಾಯಿರಿ ಸೇರಿದಂತೆ) ಲಲಿತ ಪ್ರಬಂಧ, ಆತ್ಮಕಥನ,ಹೀಗೆ ವಿವಿಧ ಪ್ರಕಾರಗಳಲ್ಲಿ ಐದು ಶ್ರೇಷ್ಠ ಕೃತಿಗಳಿಗೆ *ಶ್ರೀ ಹೊನ್ಕಲ್ ಸಾಹಿತ್ಯಿಕ ಪುರಸ್ಕಾರ, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಗೌರವ‌ ಸನ್ಮಾನದೊಂದಿಗೆ ನೀಡಲಾಗುವುದು.ಪ್ರಶಸ್ತಿಯ ಆಯ್ಕೆ ಸಮಿತಿಯವರು ಆಯ್ಕೆ ಮಾಡಿದ ಕೃತಿಯ ಲೇಖಕ/ಲೇಖಕಿಯರು ಖುದ್ದಾಗಿ ಭಾಗವಹಿಸಿ ಪುರಸ್ಕಾರ ಪಡೆಯುವಂತಿದ್ದರೆ ಮಾತ್ರ ಕಳುಹಿಸಬೇಕು.ಆ ಕಾರಣದಿಂದ ಯಾವುದೇ ಪ್ರಕಾಶಕರು,ಇತರರು ಕಳಿಸಿದ ಕೃತಿಗಳನ್ನು ಪರಿಗಣಿಸುವದಿಲ್ಲ.ಬೇರೆಯವರು ಕಳುಹಿಸಬಾರದು.

 ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ, ಗಜಲ್ ಗೋಷ್ಠಿ ಮುಂತಾದ ಕಾರ್ಯಕ್ರಮದ ಜೊತೆ ನವೆಂಬರ ಕೊನೆ ವಾರದಲ್ಲಿ ಅಥವಾ ಡಿಸೆಂಬರ್-೨೨ ರಲ್ಲಿ ನಡೆಸಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ-ಲೇಖಕ ಶ್ರೀ ಸಿದ್ಧರಾಮ ಹೊನ್ಕಲ್ ಈ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಆಸಕ್ತರು ತಮ್ಮ ೨೦೨೧ ಹಾಗೂ ೨೦೨೨ ರಲ್ಲಿ ಪ್ರಕಟವಾದ ಕೃತಿಗಳ ಮೂರು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ ಬುಕ್ ಪೋಸ್ಟ್ ತೆರೆದ ಅಂಚೆ ಅಥವಾ ಪ್ರೊಫೇಶನಲ್ ಕೋರಿಯರ್ ಮೂಲಕ ಈ ಮುಂದಿನ ವಿಳಾಸಕ್ಕೆ ೩೧-೧೦-೨೦೨೨ ರ ಒಳಗೆ ತಲುಪುವಂತೆ ಕಳಿಸಲು ಕೋರಲಾಗಿದೆ. ಶ್ರೀ ಬಸವಪ್ರಭು ಹೊನ್ಕಲ್, ಶ್ರೀ ಅಲ್ಲಮಪ್ರಭು ಪ್ರಕಾಶನ, ಕಾವ್ಯಾಲಯ, ಲಕ್ಷ್ಮೀನಗರ, ಲಕ್ಷ್ಮೀಗುಡಿ ಹತ್ತಿರ, ಅಂಚೆ-ಶಹಾಪುರ-೫೮೫೨೨೩, ಯಾದಗಿರಿ ಜಿಲ್ಲೆ. ಮೊಬೈಲ್ ನಂ.೯೯೪೫೯೨೨೧೫೧.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.

ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಶಹಾಪುರ.ಯಾದಗಿರಿ ಜಿಲ್ಲಾ.

Leave a Reply

Back To Top